ಆರ್‌ಸಿಎ ಚುನಾವಣೆಯಲ್ಲಿ ಸ್ಪರ್ಧೆ: ಲಲಿತ್ ಮೋದಿಗೆ ಅನುಮತಿ
ಗುರುವಾರ ನಡೆಯಲಿರುವ ರಾಜಸ್ತಾನ್ ಕ್ರಿಕೆಟ್ ಅಸೋಸಿಯೇಷನ್(ಆರ್‌ಸಿಎ) ಚುನಾವಣೆಯಲ್ಲಿ ಮಾಜಿ ಐಪಿಎಲ್ ಕಮಿಷನರ್ ಲಲಿತ್ ...
ಜೈಪುರ್: ಗುರುವಾರ ನಡೆಯಲಿರುವ ರಾಜಸ್ತಾನ್ ಕ್ರಿಕೆಟ್ ಅಸೋಸಿಯೇಷನ್(ಆರ್‌ಸಿಎ) ಚುನಾವಣೆಯಲ್ಲಿ ಮಾಜಿ ಐಪಿಎಲ್ ಕಮಿಷನರ್ ಲಲಿತ್ ಮೋದಿ ಸ್ಪರ್ಧಿಸಬಹುದೆಂದು ಸುಪ್ರೀಂಕೋರ್ಟ್ ನಿಯೋಜಿತ ಚುನಾವಣಾ ವೀಕ್ಷಕರು ಹೇಳಿದ್ದಾರೆ.
ಕ್ರಿಕೆಟ್ ಮಂಡಳಿಯಿಂದ ಅಜೀವ ನಿಷೇಧಕ್ಕೊಳಗಾಗಿರುವ ಮೋದಿ, ರಾಜಸ್ತಾನ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಆದರೆ ಮೋದಿ ಸ್ಪರ್ಧೆಗೆ ಆರ್‌ಸಿಎ ಅಧ್ಯಕ್ಷ ಸಿಪಿ ಜೋಷಿ ಅವರ ಆಪ್ತರಾಗಿರುವ ಬಿಲ್ವಾರಾ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಶರ್ಮಾ ಅವರು ವಿರೋಧ ವ್ಯಕ್ತ ಪಡಿಸಿದ್ದರು.
ಆರ್‌ಸಿಎ ಚುನಾವಣೆ ಬಗ್ಗೆ ಮುಖ್ಯ ವೀಕ್ಷಕರಾಗಿ ನಿವೃತ್ತ ನ್ಯಾಯಮೂರ್ತಿ ನರೇಂದ್ರ ಮೋಹನ್ ಕಾಸಿವಾಲ್ ಅವರನ್ನು ಸುಪ್ರೀಂಕೋರ್ಟ್ ನೇಮಿಸಿತ್ತು. ಬುಧವಾರ ಕಾಸಿವಾಲಾ ಅವರು ಮೋದಿ ಅವರ ನಾಮಪತ್ರವನ್ನು ಸ್ವೀಕರಿಸುವ ಮೂಲಕ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿದ್ದಾರೆ.
ಅದೇ ವೇಳೆ ಖಜಾಂಜಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮೋದಿ ಅವರ ಆಪ್ತ ಅಲ್ವಾರ್ ಡಿಲ್ಲಾ ಕ್ರಿಕೆಟ್ ಅಸೋಸಿಯೇಷನ್‌ನ ಕಾರ್ಯದರ್ಶಿ ಪವನ್ ಗೋಯಲ್ ಅವರ ನಾಮಪತ್ರವೂ ಸ್ವೀಕೃತಗೊಂಡಿದೆ.