ಪದ್ಮನಾಭ ಪ್ರಸನ್ನ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್
ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ನಾಪತ್ತೆಯಾಗಿ ಸೋಮವಾರ ದೆಹಲಿಯಲ್ಲಿ ಪತ್ತೆಯಾದ ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ...
ನವದೆಹಲಿ: ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ನಾಪತ್ತೆಯಾಗಿ ಸೋಮವಾರ ದೆಹಲಿಯಲ್ಲಿ ಪತ್ತೆಯಾದ ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್ ಅಪಹರಣ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ.
ಕೆಜೆಪಿ ಬಿಜೆಪಿ ವಿಲೀನಕ್ಕೆ ವಿರೋಧಿಸದಂತೆ ಬೆದರಿಕೆಯೊಡ್ಡಿ ಐದು ಜನರ ತಂಡ ತನ್ನನ್ನು ಬೆಂಗಳೂರಿನಿಂದ ಅಪಹರಿಸಿ ಪದಲ್ಪುರದಲ್ಲಿ ಬಿಟ್ಟಿದ್ದಾರೆ ಎಂದು ಹೇಳುವ ಮೂಲಕ ಪ್ರಸನ್ನ ಕುಮಾರ್ ರಾಜಕಾರಣಿಗಳ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಸನ್ನ ಕುಮಾರ್, ಐದು ಜನರ ತಂಡವು ಗನ್ ತೋರಿಸಿ ನನ್ನನ್ನು ಅಪಹರಿಸಿ ದೆಹಲಿಯಲ್ಲಿ ತಂದು ಬಿಟ್ಟಿದ್ದಾರೆ. ಆ ಹೊತ್ತಿನಲ್ಲಿ ನನಗೆ ಏನೂ ಮಾಡಲು ತೋಚಿಲ್ಲ ಹೇಳುತ್ತಿದ್ದಾರೆ. ಹೀಗೆ ರಾಜಕಾರಣಿಗಳ ವಿರುದ್ಧ ಅಪಹರಣ, ಬೆದರಿಕೆ ಆರೋಪ ಮಾಡುತ್ತಿರುವ ಪ್ರಸನ್ನ ಅವರ ಮಾತಿನಲ್ಲಿ ಎಷ್ಟು ನಿಜಾಂಶ ಇದೆ ಎಂದು ಪೊಲೀಸರ ತನಿಖೆಯ ನಂತರವೇ ಬಹಿರಂಗವಾಗಲಿದೆ.