ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಇರೋಂ ಶರ್ಮಿಳಾ ವಿರುದ್ಧ ವಾರೆಂಟ್

ಮಾನವ ಹಕ್ಕುಗಳಿಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿ ಹೋರಾಡುತ್ತಿರುವ ಮಣಿಪುರದ ಸಾಮಾಜಿಕ ಕಾರ್ಯಕರ್ತೆ ಇರೋಂ...

Rashmi Kasaragodu
Updated On : 19 Dec 2013, 4:50 am

ನವದೆಹಲಿ: ಮಾನವ ಹಕ್ಕುಗಳಿಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿ ಹೋರಾಡುತ್ತಿರುವ ಮಣಿಪುರದ ಸಾಮಾಜಿಕ ಕಾರ್ಯಕರ್ತೆ ಇರೋಂ ಚಾನು ಶರ್ಮಿಳಾ ಅವರಿಗೆ ದೆಹಲಿ ನ್ಯಾಯಾಲಯ ಜನವರಿ 30ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ವಾರೆಂಟ್ ನೀಡಿದೆ.

ಮಣಿಪುರದಲ್ಲಿ ವಿವಾದಾತ್ಮಕವಾಗಿರುವ ಸಶಸ್ತ್ರ ವಿಶೇಷಾಧಿಕಾರ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಕಳೆದ 12 ವರ್ಷಗಳಿಂದ ಶರ್ಮಿಳಾ ಉಪವಾಸ ಸತ್ಯಾಗ್ರಹ ನಡೆಸುತ್ತಾ ಬರುತ್ತಿದ್ದಾರೆ. ಸರ್ಕಾರ ಆಕೆಗೆ ಬಲವಂತವಾಗಿ ಆಹಾರ ಸೇವನೆಗಾಗಿ ಫೀಡಿಂಗ್ ಟ್ಯೂಬ್‌ಗಳನ್ನಿರಿಸ್ಸಿದ್ದು, ಶರ್ಮಿಳಾ ಮಾತ್ರ ತನ್ನ ಹಠದಿಂದ ಹಿಂದೆ ಸರಿದಿಲ್ಲ.

ಕಳೆದ ಅಕ್ಟೋಬರ್ 30ರಂದು ನ್ಯಾಯಾಲಯಕ್ಕೆ ಹಾಜರಾಗಲು ಹೇಳಿದ್ದರೂ, ಶರ್ಮಿಳಾ ಹಾಜರಾಗದೇ ಇದ್ದ ಕಾರಣ ಇದೀಗ ದೆಹಲಿ ನ್ಯಾಯಾಲಯ ಈ ವಾರೆಂಟ್ ವಿಧಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement