ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎಎಪಿ ಅಧಿಕಾರಕ್ಕೇರಲು ಕಾಂಗ್ರೆಸ್, ಬಿಜೆಪಿ ಬಯಕೆ?

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಗದ್ದುಗೇರುವುದನ್ನು ಕಾಣಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಆಶಿಸಿವೆ ಎಂದು ಮಾಧ್ಯಮವೊಂದು...

Rashmi Kasaragodu
Updated On : 19 Dec 2013, 3:23 am

ನವದೆಹಲಿ: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಗದ್ದುಗೇರುವುದನ್ನು ಕಾಣಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಆಶಿಸಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ರಚನೆ ಮಾಡಬೇಕೆ? ಎಂದು ಅರವಿಂದ್ ಕೇಜ್ರಿವಾಲ್ ಜನಾಭಿಪ್ರಾಯ ಕೇಳಿದ್ದರು. ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದೆಹಲಿಯ ಜನರು ಕೇಜ್ರಿವಾಲ್‌ಗೆ ಬೆಂಬಲ ನೀಡಲಿ ಎಂದು ಆಶಿಸುತ್ತಿದ್ದಾರಂತೆ.

ದೆಹಲಿಯ ಹಿಂದೀ ಸುದ್ದಿಪತ್ರಿಕೆಯೊಂದು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಎಎಪಿ ಹಮ್ಮಿಕೊಂಡಿರುವ ಜನಾಭಿಪ್ರಾಯದಲ್ಲಿ ಪಾಲ್ಗೊಳ್ಳುವಂತೆ ದೆಹಲಿ ನಾಗರಿಕರನ್ನು ಹುರಿದುಂಬಿಸುತ್ತಿವೆ ಎಂದು ಸುದ್ದಿ ಮಾಡಿದೆ.

ಏತನ್ಮಧ್ಯೆ, ಭಾನುವಾರ ರಾತ್ರಿ ವರೆಗೂ ಜನಾಭಿಪ್ರಾಯ ಸಂಗ್ರಹಿಸಲಾಗುವುದು, ಇದರ ಫಲಿತಾಂಶವನ್ನು ಡಿ.23 ಬೆಳಗ್ಗೆ ಪ್ರಕಟಿಸಲಾಗುವುದು ಎಂದು ಎಎಪಿ ಹೇಳಿಕೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement