ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎಎಪಿಗೆ ಹೆಚ್ಚಿನ ಕಾಲವಕಾಶ ನೀಡಲು ಸಿದ್ಧ: ಶಿಂಧೆ

Mainashree
Updated On : 19 Dec 2013, 3:45 am

ನವದೆಹಲಿ: ದೆಹಲಿಯಲ್ಲಿ ಸರ್ಕಾರ ರಚನೆ ಕುರಿತು ನಿರ್ಧಾರ ತಿಳಿಸಲು ಆಮ್ ಆದ್ಮಿ ಪಕ್ಷಕ್ಕೆ ಇನ್ನೂ ಹೆಚ್ಚಿನ ಕಾಲವಕಾಶ ನೀಡಲು ಸಿದ್ಧ ಎಂದು ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಗುರುವಾರ ಹೇಳಿದ್ದಾರೆ.

ದೆಹಲಿ ಸರ್ಕಾರ ರಚನೆ ಕುರಿತು ವಾದ ವಿವಾದಗಳು ನಡೆಯುತ್ತಿರುವ ಸಂದರ್ಭದಲ್ಲೇ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಎಎಪಿ ಪಕ್ಷಕ್ಕೆ ತಮ್ಮ ನಿರ್ಧಾರ ತಿಳಿಸಲು ಹೆಚ್ಚಿನ ಕಾಲವಕಾಶ ಬೇಕಿದ್ದರೆ ನೀಡಲು ಕೇಂದ್ರ ಸರ್ಕಾರ ಸಿದ್ಧ ಎಂದು ವ್ಯಂಗ್ಯವಾಡಿದ್ದಾರೆ.

ಆಮ್ ಆದ್ಮ ಪಕ್ಷಕ್ಕೆ ತಮ್ಮ ನಿರ್ಧಾರವನ್ನು ತಿಳಿಸಲು ಇನ್ನು ಎಷ್ಟು ಕಾಲವಕಾಶ ಬೇಕು ಎಂದು ದೆಹಲಿಯ ಉಪರಾಜ್ಯಪಾಲರನ್ನು ಈಗಾಗಲೇ ಕೇಳಲಾಗಿದೆ. ಉಪರಾಜ್ಯಪಾಲರಲ್ಲಿ ಮನವಿ ಮಾಡಿ ಪಡೆದುಕೊಂಡ ಕಾಲವಕಾಶ ಮುಗಿಯುತ್ತಾ ಬಂದಿದ್ದರೂ, ಎಎಪಿ ನಿರ್ಧಾರ ತಿಳಿಸಿಲ್ಲ. ತಮ್ಮ ನಿರ್ಧಾರ ತಿಳಿಸಲು ಇನ್ನೂ ಎಷ್ಟು ದಿನಗಳು ಬೇಕಾಗಿದೆ ಎಂದು ಶಿಂಧೆ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿರುವ ಎಎಪಿ, ದೆಹಲಿ ಸರ್ಕಾರ ರಚನೆ ಕುರಿತು ಡಿಸೆಂಬರ್ 23ರಂದು ನಿರ್ಧಾರ ತಿಳಿಸುತ್ತೇವೆ ಎಂದು ಈಗಾಗಲೇ ಹೇಳಿದ್ದು, ಸುಶೀಲ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಏತನ್ಮಧ್ಯೇ ಬಿಜೆಪಿ ನಾಯಕ ವಿಜಯ ಗೋಯಲ್, ದೆಹಲಿಯಲ್ಲಿ ಸರ್ಕಾರ ರಚನೆಯಾಗದೇ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವೆ ಹೊಣೆ. ಸರ್ಕಾರ ರಚನೆ ಬಗ್ಗೆ ಬೇಗ ನಿರ್ಧಾರ ತೆಗೆದುಕೊಳ್ಳದೇ ಕಾಲಹರಣ ಮಾಡಲಾಗುತ್ತಿದೆ. ಇಂದರಿಂದ ಉಂಟಾಗುವಂತಹ ಸಮಸ್ಯೆಗಳಿಗೆ ಕಾಂಗ್ರೆಸ್ ಮತ್ತು ಎಎಪಿ ಹೊಣೆಯಾಗಿರುತ್ತದೆ. ಎರಡು ಪಕ್ಷಗಳಿಗೆ ಸರ್ಕಾರ ಬೇಕಿದೆಯೇ ಅಥವಾ ಬೇಡ ಎಂಬುದರ ಬಗ್ಗೆ ಕೂಡಲೇ ನಿರ್ಧಾರ ತಿಳಿಸಿ ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement