ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಟೋಗೋ ಜೈಲಿನಿಂದ ಭಾರತೀಯ ನಾವಿಕ ಬಿಡುಗಡೆ

ಕಳೆದ ಜುಲೈನಲ್ಲಿ ಟೋಗೋ ಕರಾವಳಿಯಲ್ಲಿ ಬಂಧನಕ್ಕೊಳಗಾಗಿದ್ದ ಭಾರತೀಯ ನಾವಿಕ ಸುನಿಲ್ ಜೇಮ್ಸ್ ಅವರನ್ನು ಗುರುವಾರ...

Rashmi Kasaragodu
Updated On : 19 Dec 2013, 4:09 am

ನವದೆಹಲಿ: ಕಳೆದ ಜುಲೈನಲ್ಲಿ ಟೋಗೋ ಕರಾವಳಿಯಲ್ಲಿ ಬಂಧನಕ್ಕೊಳಗಾಗಿದ್ದ ಭಾರತೀಯ ನಾವಿಕ ಸುನಿಲ್ ಜೇಮ್ಸ್ ಅವರನ್ನು ಗುರುವಾರ ಬಿಡುಗಡೆಗೊಳಿಸಲಾಗಿದೆ.

ಟೋಗೋದ ಜೈಲಿನಿಂದ 6 ತಿಂಗಳುಗಳ ನಂತರ ಬಿಡುಗಡೆಯಾಗುತ್ತಿರುವ ಕ್ಯಾಪ್ಟನ್ ಜೇಮ್ಸ್ ಇಂದು ಸಂಜೆ ಅಲ್ಲಿಂದ ಭಾರತಕ್ಕೆ ಹೊರಡಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್, ಜೇಮ್ಸ್ ಬಿಡುಗಡೆ ವಿಷಯ ಕೇಳಿ ಖುಷಿಯಾಗಿದೆ. ನಾನು ತೃಪ್ತನಾಗಿದ್ದೇನೆ. ಅವರನ್ನು ಬಂಧಮುಕ್ತಗೊಳಿಸಲು ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ಟೋಗೋ ಜೈಲಿನಿಂದ ಜೇಮ್ಸ್‌ನ್ನು ಬಂಧಮುಕ್ತಗೊಳಿಸುವ ಸುದ್ದಿ ಸಿಕ್ಕಿದ ಕೂಡಲೇ ಜೇಮ್ಸ್ ಕುಟುಂಬದವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಧನ್ಯವಾದಗಳನ್ನರ್ಪಿಸಿದ್ದಾರೆ.

ಕೆಲವು ವಾರಗಳ ಹಿಂದೆಯಷ್ಟೇ ಜೇಮ್ಸ್ ಅವರ ಕುಟುಂಬ ಪ್ರಧಾನಿಯವರನ್ನು ಭೇಟಿ ಮಾಡಿ ಜೇಮ್ಸ್ ನ ಮಗುವಿನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದ್ದರು.

ಸಮುದ್ರಗಳ್ಳರು ಎಂಬ ಆರೋಪದ ಮೇಲೆ ಟೋಗೋ ಕರಾವಳಿಯಲ್ಲಿ ಜುಲೈ 31ರಂದು ಜೇಮ್ಸ್ ಮತ್ತು ಹಡಗಿನಲ್ಲಿದ್ದ ಇನ್ನಿಬ್ಬರು ನೌಕರರನ್ನು ಬಂಧಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement