ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದೇವಯಾನಿ ಜತೆ ಅಮಾನವೀಯ ವರ್ತನೆ ಮಾಡಿಲ್ಲ: ಪ್ರೀತ್ ಭರಾನಾ

ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗದೆ ಅವರ ಜತೆಗಿನ ಅಮೆರಿಕದ ಅಮಾನವೀಯ ವರ್ತನೆಗೆ ಆಕ್ರೋಶ ಮತ್ತಷ್ಟು ...

Rashmi Kasaragodu
Updated On : 19 Dec 2013, 2:02 am

ನ್ಯೂಯಾರ್ಕ್: ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗದೆ ಅವರ ಜತೆಗಿನ ಅಮೆರಿಕದ ಅಮಾನವೀಯ ವರ್ತನೆಗೆ ಆಕ್ರೋಶ ಮತ್ತಷ್ಟು ತೀವ್ರಗೊಳ್ಳುತ್ತಿದ್ದಂತೆ ಭಾರತ ಮೂಲದ ಅಮೆರಿಕ ಅಟರ್ನಿಯಾಗಿರುವ ಪ್ರೀತ್ ಭರಾನಾ ಅವರು ಉಭಯ ದೇಶಗಳ ನಡುವಿನ ಬಿಕ್ಕಟ್ಟು ಶಮನಕ್ಕಾಗಿ ಯತ್ನಿಸುತ್ತಿದ್ದಾರೆ.

ದೇವಯಾನಿ ಅವರೊಂದಿಗೆ ಅಮೆರಿಕ ಅಮಾನವೀಯ ವರ್ತನೆ ನಡೆಸಿಲ್ಲ, ಅವರನ್ನು ಚೆನ್ನಾಗಿಯೇ ನೋಡಿಕೊಳ್ಳಲಾಗಿತ್ತು. ದೇವಯಾನಿ ಬಂಧನದಲ್ಲಿರುವಾಗ ಆಕೆಗೆ ಕಾಫಿ ಮತ್ತು ಆಹಾರವನ್ನು ನೀಡಿದ್ದೆವು ಎಂದು ಪ್ರೀತ್ ಹೇಳಿದ್ದಾರೆ.

ಅಮೆರಿಕದಲ್ಲಿದಲ್ಲಿ ಬಂಧಿತರಿಗೆ ನೀಡದೇ ಇರುವ ಎಲ್ಲ ಸೌಕರ್ಯಗಳನ್ನು ದೇವಯಾನಿಗೆ ನೀಡಲಾಗಿದೆ. ಆಕೆಗೆ 2 ಗಂಟೆಗಳ ಕಾಲ ಫೋನ್‌ನಲ್ಲಿ ಮಾತನಾಡಿ ತನ್ನ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ತದನಂತರವೇ ಆಕೆಯನ್ನು ಬಂಧನಗೊಳಪಡಿಸಿದ್ದು ಎಂದು ಪ್ರೀತ್ ಹೇಳಿಕೆಯನ್ನು ನೀಡಿದ್ದಾರೆ.

ಏತನ್ಮಧ್ಯೆ, ದೇವಯಾನಿ ಅವರ ರಕ್ಷಣೆಗೆ ಭಾರತ ಮಹತ್ವದ ಕ್ರಮ ಕೈಗೊಂಡಿದ್ದು , ದೇವಯಾನಿ ಅವರನ್ನು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಕಾಯಂ ರಾಯಭಾರ ಕಚೇರಿಗೆ ವರ್ಗಾಯಿಸಿದೆ. ಈ ಮೂಲಕ  ದೇವಯಾನಿ ಅವರಿಗೆ ಬಂಧನದಿಂದ ಸೀಮಿತ ವಿನಾಯಿತಿ ಬದಲು ಸಂಪೂರ್ಣ ರಾಜತಾಂತ್ರಿಕ ರಕ್ಷಣೆ ಸಿಗಲಿದೆ. ಆದರೆ ಇದಕ್ಕಾಗಿ ದೇವಯಾನಿ ಅಮೆರಿಕಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement