ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಟ ಶ್ರೀಮುರಳಿ ಮನೆ ಮುಂದೆ ಯುವತಿ ಆತ್ಮಹತ್ಯೆಗೆ ಯತ್ನ

ಕನ್ನಡ ಚಿತ್ರನಟ ಶ್ರೀಮುರಳಿ ಅವರ ಮನೆ ಮುಂದೆ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ. ನಾಗವಾರದಲ್ಲಿರುವ ...

Rashmi Kasaragodu
Updated On : 19 Dec 2013, 6:02 am

ಬೆಂಗಳೂರು: ಕನ್ನಡ ಚಿತ್ರನಟ ಶ್ರೀಮುರಳಿ ಅವರ ಮನೆ ಮುಂದೆ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ. ನಾಗವಾರದಲ್ಲಿರುವ ಶ್ರೀಮುರಳಿಯವರ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಸುಂಕದಕಟ್ಟೆ ನಿವಾಸಿ 35ರ ಹರೆಯದ ಪವಿತ್ರಾ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಶ್ರೀಮುರಳಿ, ಆ ಹುಡುಗಿ ಯಾರೆಂಬುದೇ ನನಗೆ ಗೊತ್ತಿಲ್ಲ. ಹಲವು ದಿನಗಳಿಂದ ನನಗೆ ಸಂದೇಶ ಕಳುಹಿಸಿ ನೀನು ನನಗೆ ಬೇಕು ಎಂದೆಲ್ಲಾ ಹೇಳುತ್ತಿದ್ದಳು. ಆದರೆ ಈ ರೀತಿ ಸಂದೇಶ ಕಳುಹಿಸಬೇಡ, ನನಗೆ ಮದುವೆಯಾಗಿದೆ. ಪದೇ ಪದೇ ಸಂದೇಶ ಕಳುಹಿಸುತ್ತಿದ್ದುದಕ್ಕೆ ಬೈದು ಬುದ್ಧಿವಾದ ಕೂಡಾ ಹೇಳಿದ್ದೆ. ಆಕೆಯನ್ನು ನಾನು ಯಾವತ್ತೂ ಭೇಟಿಯಾಗಿಲ್ಲ.

ಇಂದು ಬೆಳಗ್ಗೆ ಆಕೆ ನನಗೆ ಕರೆ ಮಾಡಿ ನಿಮ್ಮ ಮನೆ ಮುಂದೆ ಬಂದು ಆತ್ಮಹತ್ಯೆ ಮಾಡುವುದಾಗಿ ಹೇಳಿದ್ದಳು. ಇದ್ದಕ್ಕಿದ್ದಂತೆ ಮಾತ್ರೆ ಸೇವಿಸಿ ಮನೆಯ ಬಳಿಗೆ ಬಂದಿದ್ದಳು. ಕೂಡಲೇ ನಾನು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದೆ ಎಂದು ಹೇಳಿದ್ದಾರೆ.

ಸಂಪಿಗೆಹಳ್ಳಿ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿದ್ದು ಯುವತಿಯನ್ನು ಆಕೆಯ ಹೆತ್ತವರಿಗೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement