ಮಧುಮೇಹಕ್ಕೆ ಇನ್ಸುಲಿನ್ ಮಾತ್ರೆ ಕಂಡುಹಿಡಿದ ಭಾರತೀಯ ವಿಜ್ಞಾನಿ
ಮಧುಮೇಹಕ್ಕೆ ಇನ್ಸುಲಿನ್ ಮಾತ್ರೆಯನ್ನು ಕಂಡುಹಿಡಿಯುವ ಮೂಲಕ ಭಾರತೀಯ ವಿಜ್ಞಾನಿಗಳು ವೈದ್ಯಕೀಯ ಜಗತ್ತಿನಲ್ಲಿ ಮಹತ್ವದ...
ಲಂಡನ್: ಮಧುಮೇಹಕ್ಕೆ ಇನ್ಸುಲಿನ್ ಮಾತ್ರೆಯನ್ನು ಕಂಡುಹಿಡಿಯುವ ಮೂಲಕ ಭಾರತೀಯ ವಿಜ್ಞಾನಿಗಳು ವೈದ್ಯಕೀಯ ಜಗತ್ತಿನಲ್ಲಿ ಮಹತ್ತರ ಸಾಧನೆಗೈದಿದ್ದಾರೆ.
1930ರಿಂದ ಇಂದಿನವರೆಗೆ ಯಾರಿಗೂ ಸಾಧ್ಯವಾಗದೇ ಇರುವ ಸಾಧನೆಯನ್ನು ಮಾಡಿದ ಹೆಮ್ಮೆ ಇದೀಗ ಭಾರತೀಯ ವಿಜ್ಞಾನಿಗಳಿಗೆ ಪ್ರಾಪ್ತವಾಗಿದೆ.
ಇನ್ಮುಂದೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ರೋಗಿಗಳು ಇನ್ಸುಲಿನ್ ಚುಚ್ಚುಮದ್ದನ್ನು ಚುಚ್ಚಿಕೊಳ್ಳುವ ಬದಲು ಇನ್ಸುಲಿನ್‌ನ್ನು ಮಾತ್ರೆಗಳ ರೂಪದಲ್ಲಿ ತೆಗೆದುಕೊಳ್ಳಬಹುದಾಗಿದೆ.
ಅಮೆರಿಕನ್ ಕೆಮಿಕಲ್ ಸೊಸೈಟಿ ಜರ್ನಲ್‌ನಲ್ಲಿ ಈ ಭಾರತೀಯ ವಿಜ್ಞಾನಿಗಳ ಈ ಸಂಶೋಧನೆಯ ಬಗ್ಗೆ ವಿವರಣೆ ನೀಡಲಾಗಿದೆ.
ಮಧುಮೇಹಕ್ಕೆ ಮಾತ್ರೆಗಳನ್ನು ಕಂಡುಹಿಡಿಯುವುದು ಕಷ್ಟಕರವಾದ ಕಾರ್ಯವಾಗಿತ್ತು. ಯಾಕೆಂದರೆ ಇನ್ಸುಲಿವ್ ಅಷ್ಟೊಂದು ಬೇಗ ರಕ್ತದಲ್ಲಿ ವಿಲೀನಗೊಳ್ಳುವುದಿಲ್ಲ. ಆದರೆ ಭಾರತೀಯ ವಿಜ್ಞಾನಿ ಸತತ ಪ್ರಯತ್ನದ ಮೂಲಕ ಈ ಸಂಶೋಧನೆ ನಡೆಸಿ ಮಧುಮೇಹಕ್ಕೆ ಮಾತ್ರೆಗಳನ್ನು ಕಂಡು ಹಿಡಿದಿದ್ದಾರೆ ಎಂದು ಜರ್ನಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಭಾರತದ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಫಾರ್ಮಸ್ಯುಟಿಕಲ್ ಎಜ್ಯುಕೇಷನ್ ಮತ್ತು ರಿಸರ್ಚ್‌ನ ವಿಜ್ಞಾನಿ ಸನ್ಯೋಗ್ ಜೈನ್ ಎಂಬವರು ಈ ಇನ್ಸುಲಿನ್ ಮಾತ್ರೆಯನ್ನು ಕಂಡುಹಿಡಿದಿದ್ದಾರೆ.