ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಇನ್ಫೋಸಿಸ್‌ ಬಿಪಿಓ ಮುಖ್ಯಸ್ಥ ವಿ. ಬಾಲಕೃಷ್ಣನ್ ರಾಜಿನಾಮೆ

ಇನ್ಫೋಸಿಸ್ ಬಿಪಿಓ ಮುಖ್ಯಸ್ಥ, ಫಿನಾಕಲ್, ಇಂಡಿಯಾ ಬ್ಯುಸಿನೆಸ್ ಯೂನಿಟ್ ಮತ್ತು ಇನ್ಫೋಸಿಸ್ ಲೋಡ್‌ಸ್ಟೋನ್ ಚೇರ್‌ಮೆನ್ ...

Rashmi Kasaragodu
Updated On : 20 Dec 2013, 5:52 am

ನವದೆಹಲಿ: ಇನ್ಫೋಸಿಸ್ ಬಿಪಿಓ ಮುಖ್ಯಸ್ಥ, ಫಿನಾಕಲ್, ಇಂಡಿಯಾ ಬ್ಯುಸಿನೆಸ್ ಯೂನಿಟ್ ಮತ್ತು ಇನ್ಫೋಸಿಸ್ ಲೋಡ್‌ಸ್ಟೋನ್ ಚೇರ್‌ಮೆನ್ ವಿ. ಬಾಲಕೃಷ್ಣನ್ ಪ್ರಸ್ತುತ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಬಾಲಕೃಷ್ಣನ್ ಅವರು ಇಂದು ರಾಜಿನಾಮೆ ಸಲ್ಲಿಸಿದ್ದರೂ ಡಿ. 31, 2013ರ ವರೆಗೆ ಇವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಇದರ ಜತೆಗೇ ಭಾರತದ ಎರಡನೇ ಬಹುದೊಡ್ಡ ಸಾಫ್ಟ್‌ವೇರ್ ಕಂಪನಿಯಾಗಿರುವ ಇನ್ಫೋಸಿಸ್ ತಮ್ಮ ಮಂಡಳಿಗೆ ಕಿರಣ್ ಮುಜುಂದಾರ್ ಶಾ ಅವರನ್ನು ಸ್ವತಂತ್ರ ಸದಸ್ಯೆಯನ್ನಾಗಿ ನೇಮಿಸಿದೆ.

ಮಾತ್ರವಲ್ಲದೆ ಯುಬಿ ಪ್ರವೀಣ್ ರಾವ್ ಅವರನ್ನು ಪೂರ್ಣಾವಧಿ ನಿರ್ದೇಶಕರನ್ನಾಗಿ ನೇಮಕಗೊಳಿಸಲಾಗಿದೆ.
 
ಬಾಲ ಅವರ ರಾಜಿನಾಮೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ನಾರಾಯಣಮೂರ್ತಿ, ಬಾಲಾ ಅವರ ಕೌಶಲತೆ ಮತ್ತು ಬುದ್ದಿಮತ್ತೆಯ ಸಹಾಯವಿಲ್ಲದೆ ಇನ್ಫೋಸಿಸ್ ನ ನಿರ್ವಹಣೆ ಕಷ್ಟಸಾಧ್ಯವಾಗುತ್ತಿತ್ತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement