ದೇವಯಾನಿ ಪ್ರಕರಣ: ಡೊಮಿನೋಸ್ ಔಟ್ಲೆಟ್ ಮೇಲೆ ಕಲ್ಲು ತೂರಾಟ
ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗದೆ ಜತೆಗೆ ಅಮಾನವೀಯವಾಗಿ ವರ್ತಿಸಿ, ಇದೀಗ ಕ್ಷಮೆ ಕೇಳಲ್ಲ, ಕೇಸ್ ವಾಪಸ್ ..
ಮುಂಬೈ: ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗದೆ ಜತೆಗೆ ಅಮಾನವೀಯವಾಗಿ ವರ್ತಿಸಿ, ಇದೀಗ ಕ್ಷಮೆ ಕೇಳಲ್ಲ, ಕೇಸ್ ವಾಪಸ್ ಪಡೆಯಲ್ಲ ಎಂದು ಹೇಳಿರುವ ಅಮೆರಿಕದ ನಿಲುವಿಗೆ ಮುಂಬೈಯಲ್ಲಿ ಪ್ರತಿಭಟನೆ ನಡೆದಿದೆ.
ಅಮೆರಿಕದ ವಸ್ತುಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನಕಾರರು ಶುಕ್ರವಾರ ಮುಂಬೈಯಲ್ಲಿ ಡೊಮಿನೋಸ್ ಪಿಜ್ಜಾ ಔಟ್ಲೆಟ್ ಮೇಲೆ ದಾಳಿ ಮಾಡಿದ್ದಾರೆ. ದೇವಯಾನಿ ಪ್ರಕರಣದಲ್ಲಿ ಅಮೆರಿಕ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಕೂಗಿದ ಜನರು ಡೊಮಿನೋಸ್ ಮೇಲೆ ಕಲ್ಲು ತೂರಾಟ ಮಾಡಿದ್ದು, ಅಂಗಡಿಯ ಗಾಜುಗಳು ಪುಡಿಯಾಗಿವೆ. ಈ ಘಟನೆಯಲ್ಲಿ ಯಾರಿಗೂ ಸಾವು ನೋವು ಸಂಭವಿಸಿಲ್ಲ.
ಆದಾಗ್ಯೂ, ದೇವಯಾನಿ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳದೇ ಇದ್ದರೆ ತಾನು ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ದೇವಯಾನಿಯ ಅಪ್ಪ ಹೇಳಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುಂಬೈಯಲ್ಲಿರುವ ಅಮೆರಿಕ ಮೂಲದ ಸಂಸ್ಥೆಗಳಿಗೆ ಹೆಚ್ಚಿನ ಭದ್ರತೆಯನ್ನೊದಗಿಸುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ.