ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೆದರಿಕೆ ಹಾಕಿ ವೇಶ್ಯಾವಾಟಿಕೆ ಆರೋಪ ಹೊರಿಸಿದ ಸಂಸದನ ಪುತ್ರ

ಜೀವ ಭಯದಿಂದ ಯುವತಿ ವಿರುದ್ಧ ವೇಶ್ಯಾವಾಟಿಕೆ ಆರೋಪ ಮಾಡಿದ್ದೆ. ನನಗೆ ಈಗಲೂ ಹಲವರಿಂದ..

Lingaraj Badiger
Updated On : 20 Dec 2013, 1:29 am

ಬಳ್ಳಾರಿ: ಜೀವ ಭಯದಿಂದ ಯುವತಿ ವಿರುದ್ಧ ವೇಶ್ಯಾವಾಟಿಕೆ ಆರೋಪ ಮಾಡಿದ್ದೆ. ನನಗೆ ಈಗಲೂ ಹಲವರಿಂದ ಜೀವ ಬೆದರಿಕೆ ಇದೆ ಎಂದು ವೇಶ್ಯಾವಾಟಿಕೆ ಆರೋಪದ ಮೇಲೆ ಯುವತಿಯೊಂದಿಗೆ ಹಲ್ಲೆಗೊಳಗಾಗಿದ್ದ ಯುವಕ ಎಂ.ಅತಹಾರ್ ಹೇಳಿದ್ದಾರೆ.

ಪ್ರಕರಣ ನಡೆದು ಎರಡು ದಿನಗಳ ನಂತರ ಮೊದಲ ಬಾರಿಗೆ ಮಾಧ್ಯಮಕ್ಕೆ ಬಾಯ್ಬಿಟ್ಟಿರುವ ಯುವಕ, ಸಂಸದ ಸಣ್ಣಫಕ್ಕೀರಪ್ಪ ಅವರ ಪುತ್ರ ಮುತ್ತು ಹಾಗೂ ಆತನ ಗೆಳೆಯರು ಕಾಲೇಜ್‌ಗೆ ಬಂದು ನನ್ನ ಎತ್ತಿಕೊಂಡು ಹೋಗಿ ಹಲ್ಲೆ ನಡೆಸಿದ್ದರು. ನಾವು ಹೇಳಿದಂತೆ ಮಾಡುವಂತೆ ಮಾರಕಾಸ್ತ್ರಗಳಿಂದ ಬೆದರಿಕೆ ಹಾಕಿದ್ದರು. ನಂತರ ನಾನು ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ ಮನಗೆ ಬಂದಿದ್ದೆ ಎಂದು ತಿಳಿಸಿದ್ದಾನೆ.

ನನ್ನನ್ನು ಬೆದರಿಸಿ ಆ ಯುವತಿ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಅಂತ ಹೇಳುವಂತೆ ಒತ್ತಡ ಹಾಕಿದ್ದರು. ಹೀಗಾಗಿ ನಾನು ಭಯದಿಂದ ಆ ರೀತಿ ಸುಳ್ಳು ಆರೋಪ ಮಾಡಿದೆ. ನಾನು ಹಾಗೂ ಯುವತಿ ಇಬ್ಪರೂ ಕ್ಲಾಸೆಮೇಟ್ಸ್. ನಾವಿಬ್ಬರೂ ಬರೀ ಸ್ನೇಹಿತರು ಮಾತ್ರ. ನಾವು ಪ್ರೇಮಿಗಳಲ್ಲ ಎಂದು ಅತಹಾರ್ ತಿಳಿಸಿದ್ದಾನೆ.

ಕಳೆದ ಬುಧವಾರ ಹಳೆ ಸೇಡು ತೀರಿಸಿಕೊಳ್ಳಲು ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಸುಳ್ಳು ಆರೋಪದ ಮೇಲೆ ಸಂಸದ ಫಕ್ಕೀರಪ್ಪ ಅವರ ಪುತ್ರ ಹಾಗೂ ಆತನ ಸ್ನೇಹಿತರು ಬಳ್ಳಾರಿಯ ಕೋಟೆ ಪ್ರದೇಶದಲ್ಲಿರುವ ಮನೆಯೊಂದಕ್ಕೆ ನುಗ್ಗಿ, ಅಲ್ಲಿದ್ದ ಯುವತಿ ಶ್ರೀಲಕ್ಷ್ಮೀ ಹಾಗೂ ಆಕೆಯ ಸ್ನೇಹಿತ ಅತಹಾರ್‌ನನ್ನು ಹಿಗ್ಗಾಮುಗ್ಗ ಥಳಿಸಿದ್ದರು.

ಹಲ್ಲೆಗೊಳಗಾದ ಯುವಕ ಅತಹಾರ್ ಇಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದರಿಂದ ಇಲ್ಲಿಗೆ ಬಂದಿದ್ದೇನೆ ಎಂದು ಉಲ್ಟಾ ಹೊಡೆದಿದ್ದ.

ಈ ಸಂಬಂಧ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಣ್ಣ ಫಕ್ಕೀರಪ್ಪ ಪುತ್ರ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ ಸಣ್ಣ ಫಕ್ಕೀರಪ್ಪ ಕುಟುಂಬದ ಮೂವರು ಹೆಣ್ಣು ಮಕ್ಕಳಿಗೂ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇನ್ನುಳಿದ ಆರೋಪಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement