ಮುಂಬೈ: ಮೋದಿ ರ್ಯಾಲಿಗೆ 22 ವಿಶೇಷ ರೈಲು
ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಮುಂಬೈ ರ್ಯಾಲಿಗೆ 22 ವಿಶೇಷ ರೈಲು ಸೇವೆಗಳನ್ನು...
ಮುಂಬೈ : ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಮುಂಬೈ ರ್ಯಾಲಿಗೆ 22 ವಿಶೇಷ ರೈಲು ಸೇವೆಗಳನ್ನು ಕಲ್ಪಿಸಲಾಗಿದೆ.
ಭಾನುವಾರ ಮುಂಬೈಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಮೋದಿಯವರ ಬೃಹತ್ ರ್ಯಾಲಿ ನಡೆಯಲಿದೆ. ಪ್ರಸ್ತುತ ರ್ಯಾಲಿಯಲ್ಲಿ ಸುಮಾರು 45,000 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಬಿಜೆಪಿ ಹೇಳಿದೆ. ರ್ಯಾಲಿಯಲ್ಲಿ ಭಾಗವಹಿಸುವ ಜನರಿಗೆ ಅನುಕೂಲವಾಗಲೆಂದು ಬಿಜೆಪಿ 22 ವಿಶೇಷ ರೈಲುಗಳನ್ನು ಈಗಾಗಲೇ ಕಾಯ್ದಿರಿಸಿದೆ.
ಸೆಂಟ್ರಲ್ ರೇಲ್ವೇ ಮತ್ತು ವೆಸ್ಟರ್ನ್ ರೇಲ್ವೇ ಡಿಸೆಂಬರ್ 21 ಮತ್ತು ಡಿಸೆಂಬರ್ 23ರ ನಡುವೆ 44 ವಿಶೇಷ ರೈಲು ಸೇವೆಗಳನ್ನು ಕಲ್ಪಿಸಿದ್ದು, ಜನರು ಮುಂಬೈ ತಲುಪಲು ಅನುಕೂಲವಾಗುವಂತೆ ತಾವು ಸಿದ್ಧತೆ ಮಾಡಿದ್ದೇವೆ ಎಂದು ವೆಸ್ಟರ್ನ್ ರೇಲ್ವೇ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
ಮುಂಬೈಯಲ್ಲಿ ನಡೆಯುವ ರ್ಯಾಲಿಗೆ ಜನರನ್ನು ಕರೆತರಲು ಸೆಂಟ್ರಲ್ ರೇಲ್ವೇ 12 ಹಾಗು ವೆಸ್ಟರ್ನ್ ರೇಲ್ವೆ 10 ವಿಶೇಷ ರೈಲುಗಳ ಸೇವೆಯನ್ನು ಜನರಿಗೆ ನೀಡಿವೆ.