ಉಭಯ ದೇಶಗಳ ಬಾಂಧವ್ಯಕ್ಕೆ ಧಕ್ಕೆಯಾಗುವುದು ಬೇಡ: ಖುರ್ಷಿದ್
ನವದೆಹಲಿ: ಕೇವಲ ಒಂದು ಘಟನೆಯಿಂದ ಉಭಯ ದೇಶಗಳ ಬಾಂಧವ್ಯಕ್ಕೆ ಧಕ್ಕೆಯಾಗುವುದು ಬೇಡ ಎಂದು ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಶನಿವಾರ ಹೇಳಿದ್ದಾರೆ.
ದೇವಾಯಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಒಂದು ತೀರ್ಮಾನಕ್ಕೆ ಬರಲಾಗುವುದು. ಕೇವಲ ಒಂದು ಘಟನೆಯಿಂದಾಗಿ ಸಂಬಂಧ ಹಾಳು ಮಾಡಿಕೊಳ್ಳಲು ಎರಡು ದೇಶಗಳಿಗೆ ಇಷ್ಟವಿಲ್ಲ ಎಂದು ಖುರ್ಷಿದ್ ತಿಳಿಸಿದ್ದಾರೆ.
ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗದೆ ಜತೆಗೆ ಅಮಾನವೀಯವಾಗಿ ವರ್ತಿಸಿರುವ ಸಂಬಂಧ ಕ್ಷಮೆ ಕೇಳಲ್ಲ ಎಂದು ಅಮೆರಿಕ ಹೇಳಿತ್ತು. ಅಮೆರಿಕ ನಿಲುವಿಗೆ ಮುಂಬೈನಲ್ಲಿ ಪ್ರತಿಭಟನೆ ನಡೆದಿದೆ.