ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಭಾರತಕ್ಕೆ 457 ರನ್‌ಗಳ ಮುನ್ನಡೆ

ದಕ್ಷಿಣ ಅಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನ ದ್ವಿತೀಯ ಇನ್ಸಿಂಗ್ಸ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದ್ದು 457 ರನ್‌ಗಳ ಮುನ್ನಡೆ ಸಾಧಿಸಿದೆ...

Rashmi Kasaragodu
Updated On : 21 Dec 2013, 7:52 am

ಜೊಹಾನ್ಸ್‌ಬರ್ಗ್:  ದಕ್ಷಿಣ ಅಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನ ದ್ವಿತೀಯ ಇನ್ಸಿಂಗ್ಸ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದ್ದು 457 ರನ್‌ಗಳ ಮುನ್ನಡೆ ಸಾಧಿಸಿದೆ.

ಎರಡು ವಿಕೆಟ್ ನಷ್ಟಕ್ಕೆ 284 ರನ್ ಸ್ಕೋರ್ ಇದ್ದು, ಶನಿವಾರ ನಾಲ್ಕನೇ ದಿನದ ಆಟ ಆರಂಭಿಸಿದ ಟೀಂ ಇಂಡಿಯಾ 412 ರನ್‌ಗೆ ಆಲ್ ಔಟಾಗಿದೆ.

ಸೆಂಚುರಿ ಬಾರಿಸುವ ಮೂಲಕ ಉತ್ತಮ ಆಟ ಪ್ರದರ್ಶಿಸಿದ ಚೇತೇಶ್ವರ ಪೂಜಾರ (153), ಮತ್ತು ಶತಕ ವಂಚಿತ ವಿರಾಟ್ ಕೊಹ್ಲಿ (96) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಬೃಹತ್ ಮೊತ್ತ ದಾಖಲಿಸುವಂತಾಯಿತು.

ನಾಲ್ಕನೇ ದಿನದ ಪಂದ್ಯದಲ್ಲಿ ರೋಹಿತ್ ಶರ್ಮಾ(6), ಅಜೆಂಕ್ಯ ರೆಹಾನೆ (15), ಧೋನಿ (29), ಆರ್. ಅಶ್ವಿನ್ (7), ಇಶಾಂತ್ ಶರ್ಮಾ (4), ಮುಹಮ್ಮದ್ ಶಮಿ (4) ರನ್ ಗಳಿಸಿ ಔಟಾಗಿದ್ದು, 29 ರನ್ ಗಳಿಸಿದ ಜಹೀರ್ ಖಾನ್ ಅಜೇಯರಾಗಿ ಉಳಿದಿದ್ದಾರೆ.

ದಕ್ಷಿಣ ಆಫ್ರಿಕಾದ ಫಿಲಾಂಡರ್ 4,  ಮೋರ್ಕೆಲ್ 3, ಸ್ಟೇಯ್ನ್ ಮತ್ತು ಕಾಲಿಸ್ ತಲಾ ಒಂದು ವಿಕೆಟ್ ಪಡೆದ್ದಾರೆ.

ಭಾರತಕ್ಕೆ ಸ್ಕೋರ್‌ನ್ನು ಬೆನ್ನಟ್ಟಿ ಬ್ಯಾಟಿಂಗ್‌ಗಿಳಿದಿರುವ ದಕ್ಷಿಣಾ ಆಫ್ರಿಕಾ ಇದೀಗ 24ನೇ ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 77 ರನ್ ಗಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement