ಸಂಜಯ್ದತ್ಗೆ ಜೈಲಿನಿಂದ 1 ತಿಂಗಳ ರಜೆ
ಬಾಲಿವುಡ್ ನಟ ಸಂಜಯ್ದತ್ ಅವರಿಗೆ ಪುಣೆಯ ಯೆರ್ವಾಡಾ ಜೈಲಿನಿಂದ 1 ತಿಂಗಳುಗಳ ಕಾಲ ರಜೆ ಸಿಕ್ಕಿದೆ. ಶನಿವಾರ...
ಮುಂಬೈ: ಬಾಲಿವುಡ್ ನಟ ಸಂಜಯ್ದತ್ ಅವರಿಗೆ ಪುಣೆಯ ಯೆರ್ವಾಡಾ ಜೈಲಿನಿಂದ 1 ತಿಂಗಳುಗಳ ಕಾಲ ರಜೆ ಸಿಕ್ಕಿದೆ.
ಶನಿವಾರ ಬೆಳಗ್ಗೆ 10 ಗಂಟೆಗೆ ಜೈಲಿನಿಂದ ರಜೆ ನಿಮಿತ್ತ ಬಿಡುಗಡೆಗೊಂಡಿರುವ ದತ್ ಮುಂಬೈಯಲ್ಲಿರುವ ತನ್ನ ಮನೆಯಲ್ಲಿ 1 ತಿಂಗಳು ಕಾಲ ರಜೆ ಕಳೆಯಲಿದ್ದಾರೆ.
ಪತ್ನಿ ಮಾನ್ಯತಾ ಅವರಿಗೆ ಆರೋಗ್ಯ ಸರಿ ಇಲ್ಲ ಎಂದು ದತ್ ಪರೋಲ್ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸ್ವೀಕೃತಗೊಂಡಿದ್ದು, ದತ್ಗೆ ರಜೆಗೆ ಅನುಮತಿ ಸಿಕ್ಕಿದೆ.
ಮಾನ್ಯತಾ ಅವರಿಗೆ ಕರುಳಿನಲ್ಲಿ ಗಡ್ಡೆಯಾಗಿರುವ ಕಾರಣ ಕೆಲವು ದಿನಗಳ ಹಿಂದೆ ಅಸ್ವಸ್ತಗೊಂಡಿದ್ದರು. ಮಾನ್ಯತಾ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಸಂಜಯ್ ದತ್ಗೆ ಈ ರಜೆ ಅನುಮತಿಸಲಾಗಿದೆ.
ಅಕ್ಟೋಬರ್ನಲ್ಲಿಯೂ ಇದೇ ಕಾರಣವೊಡ್ಡಿ ರಜೆಯಲ್ಲಿ ಬಂದಿದ್ದ ದತ್ ಸಿನಿಮಾ ವೀಕ್ಷಣೆ ಮಾಡಿರುವುದಕ್ಕೆ ಪ್ರತಿಭಟನೆಗಳೂ ನಡೆದಿತ್ತು.