ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಹೀರ್ ಖಾನ್‌ಗೆ 300 ವಿಕೆಟ್ ದಾಖಲೆ ಗರಿ

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತದ ಬೌಲರ್ ಜಹೀರ್ ಖಾನ್ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಭಾರತ ...

Rashmi Kasaragodu
Updated On : 22 Dec 2013, 7:12 am

ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತದ ಬೌಲರ್ ಜಹೀರ್ ಖಾನ್ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಭಾರತ ತಂಡಕ್ಕೆ ಮರಳಿ ಬಂದಿರುವ ಜಹೀರ್ ಖಾನ್ ಭಾನುವಾರ 300ನೇ ವಿಕೆಟ್ ಪಡೆಯುವ ಮೂಲಕ ನೂತನ ದಾಖಲೆ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಜಾಕ್ವೆಸ್ ಕಾಲೀಸ್ ಅವರ ವಿಕೆಟ್ ಕಬಳಿಸುವ ಮೂಲಕ ಜಹೀರ್ 300 ವಿಕೆಟ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಪ್ರಸ್ತುತ ಪಂದ್ಯ ಗೆಲುವಿನ ಸನಿಹದಲ್ಲಿರುವ  ಟೀಂ ಇಂಡಿಯಾದ ಹಿರಿಯ ಬೌಲರ್, ದಕ್ಷಿಣ ಆಫ್ರಿಕಾದ ಹಿರಿಯ  ಬ್ಯಾಟ್ಸ್‌ಮೆನ್‌ನ ವಿಕೆಟ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದು ಭಾರತದ ಪಾಲಿಗೆ ಸಂತಸ ತಂದಿದೆ.

ಈ ದಾಖಲೆಯ ಮೂಲಕ ಜಹೀರ್ 300 ವಿಕೆಟ್ ಪಡೆದಿರುವ ಕಪಿಲ್ ದೇವ್, ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್‌ಪ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ಗಾಯದ ಕಾರಣ ಕೆಲ ಕಾಲಗಳ ವರೆಗೆ ಟೀಂನಿಂದ ದೂರ ಸರಿದಿದ್ದ ಜಹೀರ್ ಇದೀಗ ಉತ್ತಮ ಪ್ರದರ್ಶನದೊಂದಿಗೆ ವಾಪಸ್ ಬಂದಿದ್ದು, ಟೀಂ ಇಂಡಿಯಾಗೆ ಹೆಚ್ಚಿನ ಬಲ ಬಂದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement