ಎಎಪಿ ಜನತೆಗೆ ದ್ರೋಹ ಮಾಡಿದೆ: ಹರ್ಷವರ್ಧನ್
ಆಮ್ ಆದ್ಮಿ ಪಕ್ಷ(ಎಎಪಿ) ಭ್ರಷ್ಟ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸುವ ಮೂಲಕ ಜನತೆಗೆ ದ್ರೋಹ ಮಾಡಿದೆ..
ನವದೆಹಲಿ: ಆಮ್ ಆದ್ಮಿ ಪಕ್ಷ(ಎಎಪಿ) ಭ್ರಷ್ಟ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸುವ ಮೂಲಕ ಜನತೆಗೆ ದ್ರೋಹ ಮಾಡಿದೆ ಎಂದು ಬಿಜೆಪಿ ನಾಯಕ ಡಾ.ಹರ್ಷವರ್ಧನ್ ಅವರು ಸೋಮವಾರ ಆರೋಪಿಸಿದ್ದಾರೆ.
ಕಾಂಗ್ರೆಸ್ ಬೆಂಬಲದೊಂದಿಗೆ ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವ ಎಎಪಿ ನಿರ್ಧಾರ ಹೊರ ಬೀಳುತ್ತಿದ್ದಂತೆ, ಆಮ್ ಆದ್ಮಿ ವಿರುದ್ಧ ವಾಗ್ದಾಳಿ ನಡೆಸಿದ ಹರ್ಷವರ್ಧನ್, ಅಧಿಕಾರಕ್ಕಾಗಿ ಎಎಪಿ ತನ್ನ ತತ್ವ ಸಿದ್ಧಾಂತಗಳನ್ನೇ ಮರೆತಿದೆ ಎಂದಿದ್ದಾರೆ.
ಭ್ರಷ್ಟ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿ, ಚುನಾವಣೆಯಲ್ಲಿ ಗೆಲವು ಸಾಧಿಸಿರುವ ಎಎಪಿ ಇದೀಗ ಆದೇ ಪಕ್ಷದೊಂದಿಗೆ ಸರ್ಕಾರ ರಚನೆ ಮಾಡುವ ಮೂಲಕ ನಂಬಿಕೆದ್ರೋಹ ಮಾಡಿದೆ ಎಂದಿದ್ದಾರೆ.