ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿಗೆ ದೇಶಕ್ಕಿಂತ ದೊಡ್ಡವನು ಎಂಬ ಮನಸ್ಥಿತಿ: ಜೆಡಿಯು

ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದೇಶಕ್ಕಿಂತ ದೊಡ್ಡವನು...

Mainashree
Updated On : 23 Dec 2013, 3:10 am

ನವದೆಹಲಿ: ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದೇಶಕ್ಕಿಂತ ದೊಡ್ಡವನು ನಾನೇ ಎಂಬ ಮನಸ್ಥಿತಿ ಹೊಂದಿದ್ದಾರೆ ಎಂದು ಜೆಡಿ-ಯು ನಾಯಕ ಶಿವಾನಂದ ತಿವಾರಿ ಸೋಮವಾರ ಹೇಳಿದ್ದಾರೆ.

ಭಾರತಕ್ಕೆ ಮತ ನೀಡಿ ಎಂದು ಮುಂಬೈ ರ್ಯಾಲಿಯಲ್ಲಿ ನರೇಂದ್ರ ಮೋದಿ ನಿನ್ನೆ ಭಾಷಣ ಮಾಡಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ಶಿವಾನಂದ್ ತಿವಾರಿ ಅವರು, ಈ ರೀತಿ ಹೇಳಿಕೆ ನೀಡಿರುವ ಮೋದಿಯ ಪ್ರಕಾರ, ಅವರು ಭಾರತವನ್ನು ಪ್ರತಿನಿಧಿಸಿದಂತೆ ಆಗಿದೆ. ಅಂದರೆ ಮೋದಿ ದೇಶಕ್ಕಿಂತ ದೊಡ್ಡವರು ಎಂಬ ಮನಸ್ಥಿತಿ ಹೊಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

ದೇಶಕ್ಕಿಂತ ದೊಡ್ಡವನ್ನು ನಾನೇ ಎಂಬ ಮನಸ್ಥಿತಿ ಹೊಂದಿರುವ ಮೋದಿಯಂತವರಿಂದ ದೇಶಕ್ಕೆ ಮತ್ತು ದೇಶದ ಜನತೆಗೆ ತೊಂದರೆಯಾಗಲಿದೆ. ಪ್ರಧಾನಿಯಾಗುವುದಕ್ಕಿಂತ ಮೊದಲೇ ಮೋದಿ ಇಂತಹ ದಬ್ಬಾಳಿಕೆ ನಡೆಸುತ್ತಿದ್ದರೇ, ಒಂದು ವೇಳೆ ಆಯ್ಕೆಯಾದರೇ ಇನ್ನೇಷ್ಟು ದಬ್ಬಾಳಿಕೆ ಮಾಡುತ್ತಾರೆಂಬುದರ ಬಗ್ಗೆ ಜನ ಚಿಂತಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

ದೇಶದ ಇತಿಹಾಸ ಮತ್ತು ರಾಜ್ಯಗಳ ಇತಿಹಾಸದ ಬಗ್ಗೆ ಅರಿವೇ ಇಲ್ಲದ ಮೋದಿ, ಇತಿಹಾಸ ಕುರಿತು ಭಾಷಣ ಮಾಡುತ್ತಾರೆ. ಕ್ವಿಟ್ ಇಂಡಿಯಾ ಚಳುವಳಿ ಬಗ್ಗೆ ಮಾತನಾಡುವ ಮೋದಿಗೆ ಅದರ ಮಹತ್ವ ತಿಳಿದಿಲ್ಲ ಎಂದು ಅವರು ಆಪಾದಿಸಿದ್ದಾರೆ.

ಏತನ್ಮಧ್ಯೇ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ದೇಶದ ಸಮಸ್ಯೆಗೆ ಜನತೆ ಕಾರಣವಲ್ಲ. ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಹಾವಳಿ ದೇಶವನ್ನು ಸಂಕಷ್ಟ ಸ್ಥಿತಿಗೆ ತಲುಪಿಸಿದೆ. ಹಾಗಾಗಿ ಕಾಂಗ್ರೆಸ್‌ನಂತಹ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಶಿವಾನಂತ ತಿವಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement