ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಕೈಯಿಂದ ನಿತೀಶ್ ಸಾವು: ಬಿಜೆಪಿ ನಾಯಕ ಗಿರಿರಾಜ್ ಸಿಂಗ್

Mainashree
Updated On : 24 Dec 2013, 3:26 am

ನವದೆಹಲಿ/ಪಾಟ್ನಾ: 2014ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ 40 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲುಕಂಡರೆ, ನರೇಂದ್ರ ಮೋದಿ ಅವರ ಕೈಯಿಂದಲೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾವನ್ನಪ್ಪುತ್ತಾರೆ ಎಂದು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಹಾರದ 40 ಕ್ಷೇತ್ರದಲ್ಲಿ ಬಿಜೆಪಿ ಗೆಲವು ಕಾಣದೆ ಇದ್ದರೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದಲೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾವನ್ನಪ್ಪುತ್ತಾರೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಮತ್ತು ಜೆಡಿಯು ಮೈತ್ರಿಯಾಗಿದ್ದಾಗ, ಗಿರಿರಾಜ್ ಸಿಂಗ್ ಅವರು ಪಶಸಂಗೋಪನೆ ಸಚಿವರಾಗಿದ್ದರು. ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಜೆಡಿಯು ವಾಪಸ್ ಪಡೆದ ನಂತರ ಸಚಿವ ಸ್ಥಾನ ಕಳೆದುಕೊಂಡಿದ್ದರು.

ಬಿಹಾರದಲ್ಲಿ ಬಿಜೆಪಿ 40 ಕ್ಷೇತ್ರದಲ್ಲಿ ಗೆಲವು ಸಾಧಿಸದಿದ್ದರೆ, ನಿತೀಶ್ ಕಥೆ ಮುಗಿಯುವುದಲ್ಲದೇ, ಸ್ವತಃ ನರೇಂದ್ರ ಮೋದಿಯವರಿಂದಲೇ ಅಂತ್ಯಗೊಳ್ಳುತ್ತಾರೆ ಎಂದು ಗಿರಿರಾಜ್ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ.

ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜೆಡಿಯು ನಾಯಕ ಅಲಿ ಅನ್ವಾರ್, ಬಿಜೆಪಿ ನಾಯಕರ ಇಂತಹ ಹೇಳಿಕೆಗಳು ಆಶ್ಚರ್ಯವೇನಲ್ಲ. ಬಿಜೆಪಿಯ ನಾಯಕರ ಭಾಷೆ ಈ ರೀತಿಯದ್ದಾಗಿದೆ. ಅವರನ್ನು ಮುಂದುವರೆಯಲು ಬಿಟ್ಟರೆ ಪ್ರಜಾಪ್ರಭುತ್ವವನ್ನೇ ಹತ್ಯೆಗೈಯುತ್ತಾರೆ ಎಂದು ಆಪಾದಿಸಿದ್ದಾರೆ.

ನರೇಂದ್ರ ಮೋದಿ ದೇಶದ ಅತ್ಯಂತ ಪ್ರಭಾವಿತ ಭಯೋತ್ಪಾದಕ. ಆದರೆ ವಿಪರ್ಯಾಸವೆಂದರೆ ಅವರು ಭಯೋತ್ಪಾದಕ ಮುಕ್ತ ದೇಶವನ್ನಾಗಿಸುತ್ತೇನೆ ಎಂದು ಭಾಷಣ ಮಾಡುತ್ತಾರೆ. ಒಬ್ಬ ವ್ಯಕ್ತಿಯನ್ನು ಸಾಯುಸುತ್ತೇನೆ ಎಂದು ಹೇಳವವರು, ಜೀವ ಬೆದರಿಕೆಯಿಂದ ಭದ್ರತಾ ಸಿಬ್ಬಂದಿಗಳೊಂದಿಗೆ ತಿರುಗಾಡುತ್ತಾರೆ ಎಂದು ಬಿಹಾರದ ಕೃಷಿ ಸಚಿವ ನರೇಂದ್ರ ಸಿಂಗ್ ವ್ಯಂಗ್ಯವಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement