ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಆದರ್ಶ ಹಗರಣ ವಿವಾದ ಶೀಘ್ರ ಇತ್ಯಾರ್ಥ: ಸೋನಿಯಾ

ಆದರ್ಶ ಹೌಸಿಂಗ್ ಸೊಸೈಟಿ ಹಗರಣ ವಿವಾದವನ್ನು ಶೀಘ್ರದಲ್ಲೇ ಇತ್ಯಾರ್ಥಪಡಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ...

Vishwanath S
Updated On : 28 Dec 2013, 2:19 am

ನವದೆಹಲಿ: ಆದರ್ಶ ಹೌಸಿಂಗ್ ಸೊಸೈಟಿ ಹಗರಣ ವಿವಾದವನ್ನು ಶೀಘ್ರದಲ್ಲೇ ಇತ್ಯಾರ್ಥಪಡಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಶನಿವಾರ ಹೇಳಿದ್ದಾರೆ.

ಇಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ 'ಕಾಂಗ್ರೆಸ್ ಸ್ಥಾಪನಾ ದಿನಾಚರಣೆಯ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆದರ್ಶ ಸೊಸೈಟಿ ಪ್ರಕರಣದ ವಿವಾದದ ಕುರಿತಾಗಿ ಪಕ್ಷದ ಮುಖಂಡರೊಡನೆ ಈಗಾಗಲೇ ಚರ್ಚಿಸಲಾಗಿದ್ದು, ಪ್ರಕರಣವನ್ನು ಪರಿಹರಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮಗೊಳ್ಳಲಾಗುವುದು ಎಂದರು.

ಭ್ರಷ್ಟಾಚಾರ ಮತ್ತು ಹಣದುಬ್ಬರದ ಬಗ್ಗೆಯು ಸಭೆಯಲ್ಲಿ ಚರ್ಚಿಸಲಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ನಮ್ಮ ಮುಂದಿರುವ ದೊಡ್ಡ ಸವಾಲು. ಇದರ ವಿರುದ್ಧ ನಾವು ಒಟ್ಟಾಗಿ ಹೋರಾಡಲು ಮತ್ತು ಅದನ್ನು ಸಮರ್ಥವಾಗಿ ಎದುರಿಸುವ ಕುರಿತಾಗಿ ನಿರ್ಧರಿಸಲಾಗಿದೆ ಎಂದು ಸೋನಿಯಾ ತಿಳಿಸಿದ್ದಾರೆ.

ಮಾಧ್ಯಮದವರು ಕೇವಲ ಕಾಂಗ್ರೆಸ್‌ನ ಅಧಿಕಾರವಿರುವ ರಾಜ್ಯಗಳ ಭ್ರಷ್ಟಾಚಾರಗಳ ವಿಚಾರಗಳನ್ನೆ ಎತ್ತಿ ತೋರಿಸುತ್ತಿದ್ದಾರೆ. ನಮ್ಮ ತಪ್ಪುಗಳನ್ನು ತೋರಿಸುತ್ತಿರುವುದು ಸರಿ. ಅದೇ ರೀತಿ ಕಾಂಗ್ರೆಸೇತ್ತರ ರಾಜ್ಯಗಳಲ್ಲಿನ ಭಷ್ಟಚಾರದ ಕುರಿತಾಗಿಯು ಗಮನಹರಿಸಿ ಎಂದು ಸೋನಿಯಾ ಹೇಳಿದ್ದಾರೆ.

ನಿನ್ನೆಯಷ್ಟೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಆದರ್ಶ ಸೊಸೈಟಿ ಪ್ರಕರಣದ ವರದಿಯನ್ನು ಮಹಾರಾಷ್ಟ್ರ ಸರ್ಕಾರ ಪುನರ್‌ಪರಿಶೀಲಿಸಬೇಕು ಎಂದು ಹೇಳಿದ್ದರು. ರಾಹುಲ್‌ರ ಈ ಹೇಳಿಕೆಯ ಹಿಂದೆಯೆ ಕಾಂಗ್ರೆಸ್ ಇಂತಹ ನಿರ್ಧಾರಕ್ಕೆ ಬಂದಿದೆ.

ಮಹಾರಾಷ್ಟ್ರದ ಸರ್ಕಾರ ಡಿಸೆಂಬರ್ 20ರಂದು ವಿಧಾನಸಭೆಯಲ್ಲಿ ವರದಿಯನ್ನು ಮಂಡಿಸಿತ್ತು. ಆ ನಂತರ ವರದಿಯನ್ನು ಸರ್ಕಾರ ತಿರಸ್ಕರಿಸಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement