ಬೆಂಗಳೂರು-ನಾಂದೇಡ್ ರೈಲಿನಲ್ಲಿ ಅಗ್ನಿ ಆಕಸ್ಮಿಕ: 25 ಸಾವು
ಬೆಂಗಳೂರು-ನಾಂದೇಡ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶನಿವಾರ ಬೆಳಗಿನ ಜಾವ ಅಗ್ನಿ ಅವಘಡ..
ಬೆಂಗಳೂರು: ಬೆಂಗಳೂರು-ನಾಂದೇಡ್ ಎಕ್ಸ್‌ಪ್ರೆಸ್ ರೈಲಿನ ಒಂದು ಬೋಗಿಯಲ್ಲಿ ಶನಿವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 25 ಪ್ರಯಾಣಿಕರು ಸಜೀವ ದಹನವಾಗಿದ್ದು, 40 ಕ್ಕು ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 13 ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ.
ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟಿದ್ದ ರೈಲು ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಆಂಧ್ರಪ್ರದೇಶದ ಆನಂತಪುರಂ ಜಿಲ್ಲೆಯ ಪುಟ್ಟಪರ್ತಿ ಬಳಿ ರೈಲಿನ ಬಿ.1 ಎಸಿ ಕೋಚ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬೋಗಿ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ 25 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ದುರಂತ ಸಂಭವಿಸಿರಬಹುದು ಎನ್ನಲಾಗಿದೆ. ಹವಾನಿಯಂತ್ರಿತ ಎಸಿ ಕೋಚ್ ಇದಾಗಿದ್ದು, ಸುಮಾರು 67 ಮಂದಿ ಪ್ರಯಾಣಿಕರು ಬೋಗಿಯಲ್ಲಿದ್ದರು.
ರೇಲ್ವೆ ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ಘಟನೆ ಕುರಿತು ತನಿಖೆಗೆ ಆದೇಶಿಸಿರುವ ರೇಲ್ವೆ ಸಚಿವ ಮಲ್ಲಿಕಾರ್ಜುನ್ ಖರ್ಗೆ ಅವರು, ಮೃತಪಟ್ಟವರಿಗೆ ತಲಾ 5 ಲಕ್ಷ ರುಪಾಯಿ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರುಪಾಯಿ ಪರಿಹಾರ ಘೋಷಿಸಿದ್ದಾರೆ.
ದುರಂತಕ್ಕೀಡಾದ ಎಸಿ ಬೋಗಿ ಬಿ-1ರಲ್ಲಿದ್ದ 64 ಪ್ರಯಾಣಿಕರ ವಿವರ:
ಎಸಿ ಬವೀಣಾ ರಾವ್, ಅಮರೇಶ್ ಮಕಲ್, ವಿಶಾಲಾಕ್ಷಿ, ರಾಧಕೃಷ್ಣ, ವಿನಯ್, ವೈಷ್ಣವಿ ರಾವ್, ಅಂಬುಜಾ ದೇಶ್‌ಮುಖ್, ಪಂಕಜ್ ದೇಶ್‌ಮುಖ್, ಉಮೇಶ್, ಪ್ರಭಾಕರ್, ಈಶ್ವರಿ, ಅಕ್ಷಯ ಪೆರರ್, ರತಿ ಚಂಪಾಲಾಲ್, ಬಸವಗೌಡ, ಹನುಮಗೌಡ, ಲೀಲಾ, ವೀರೇಶ್ ಪಾಟೀಲ್, ಧೀರಜ್ ಕುಮಾರ್, ಶ್ರೀನಿವಾಸ್, ಅನಿಲ್, ಅಮಿತ್, ಸುನಿತಾ, ಚಿರಾಗ್, ಸಾಕ್ಷಿ, ನಾಗಮಣಿ, ಜೀವನ್, ಎಂ.ಬಿ. ಪಾಟೀಲ್, ಶ್ರೇಯಾ, ತಾರುಲ್ ಸಿಂಗ್, ಪದ್ಮಿನಿ, ನರಹರಿ ರಾವ್, ಅನಿಲ್ ಕುಮಾರ್, ಪಾಟೀಲ್, ಬಸವರಾಜು, ಅನ್ನಪೂರ್ಣ, ಸರ್ವಮಂಗಳ, ಶರಣ ಬಸವ, ವಿಧಿತಾ, ರಾಮ್‌ಮೂರ್ತಿ, ನಾಗೇಶ್ ರಾವ್, ವಿಜಯ್, ಪ್ರತಾಪ್, ವಿನಯ್, ನಟೇಶ್, ಕಿಶೋರ್ ಕುಮಾರ್, ಅನಿರುದ್ಧ್ ಕುಲಕರ್ಣಿ, ರಾಹುಲ್, ಶ್ರೀಕಾಂತ್, ಇಬ್ರಾಹಿಂ ರಾಹಿ, ಡಾ. ಅಸ್ರ, ಸುಧಾ, ಕುಲಕರ್ಣಿ, ಕಮಲ್ ದೀಪ್ ಸಿಂಗ್, ರಮಾನಂದಮ್, ವಿವೇಕ್, ಕವಿತಾ ನಾಗ್ರೆ, ಈಶ್ವರ್ ನಾಗ್ರೆ, ಜೈ ನಾಗ್ರೆ, ಸಂಜೀವ ಕೋಲೂರು, ಕೃಷ್ಣಮೂರ್ತಿ, ಬಲ್ವೀರ್ ಕೌರ್, ದಲ್ವೀರ್ ಕೌರ್, ಶ್ರೀಲತಾ, ರತಿ, ಪ್ರೇಮಲತಾ.
ಸಹಾಯವಾಣಿ ಸಂಖ್ಯೆ- 080 22354108, 080 22259721, 080 22156554
ಎಸ್‌ಎಸ್‌ಪಿ ನಿಲಯಂ-08555289125