ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎಸ್‌ಪಿ ನಾಯಕ ಫಾರೂಖಿ ಎಎಪಿ ಸೇರ್ಪಡೆ?

Lingaraj Badiger
Updated On : 29 Dec 2013, 7:14 am

ಘಾಝಿಯಾಬಾದ್: ಸಮಾಜವಾದಿ ಪಕ್ಷದ ನಾಯಕ ಕಮಲ್ ಫಾರೂಖಿ ಅವರು ಭಾನುವಾರ ಆಮ್ ಆದ್ಮಿ ಪಕ್ಷ(ಎಎಪಿ)ದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದು, ಎಎಪಿ ಸೇರುವ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.

ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಫಾರೂಖಿ ಅವರು ಇಂದು ಬೆಳಗ್ಗೆ ಕೇಜ್ರಿವಾಲ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಸುಮಾರು ಒಂದು ಗಂಟೆಗಳ ಕಾಲ ಚರ್ಚಿಸಿದ್ದಾರೆ.

ಪಕ್ಷದ ಇತರ ನಾಯಕರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತಿಳಿಸುವುದಾಗಿ ಕೇಜ್ರಿವಾಲ್ ಅವರು ತಮ್ಮನ್ನು ಭೇಟಿ ಮಾಡಿದ ಫಾರೂಖಿ ಅವರಿಗೆ ಹೇಳಿರುವುದಾಗಿ ಎಎಪಿ ಮೂಲಗಳು ತಿಳಿಸಿವೆ.

ಕೇಜ್ರಿವಾಲ್ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಫಾರೂಖಿ, ದೇಶದಲ್ಲಿ ಎಎಪಿ ಪರವಾದ ಅಲೆ ಇದೆ. ಈ ಬಗ್ಗೆ ನಾನು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಬಹಳಷ್ಟು ಸಮಯ ಚರ್ಚಿಸಿದ್ದೇನೆ ಎಂದರು.

ಇನ್ನು ಎಎಪಿ ಸೇರುತ್ತಿರಾ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಫಾರೂಖಿ, ಇಡೀ ದೇಶವೇ ಎಎಪಿ ಸೇರಬೇಕು ಎಂದು ಬಯಸುತ್ತದೆ. ನೀವು ಸಹ ಮುಂದೆ ಎಎಪಿಗೆ ಸೇರುತ್ತಿರಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement