ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇಜ್ರಿವಾಲ್‌ಗೆ ಜ್ವರ, ಉಚಿತ ನೀರು ಪೂರೈಕೆ ಆದೇಶ ವಿಳಂಬ?

ದೆಹಲಿ ನೂತನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಇಂದು ನಡೆಯಬೇಕಿದ್ದ ಪಕ್ಷದ ಸಭೆಗೆ...

Vishwanath S
Updated On : 30 Dec 2013, 1:20 am

ನವದೆಹಲಿ: ದೆಹಲಿ ನೂತನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಇಂದು ನಡೆಯಬೇಕಿದ್ದ ಪಕ್ಷದ ಸಭೆಗೆ ಗೈರಾಗುತ್ತಿರುವುದಕ್ಕೆ ಸೋಮವಾರ ವಿಷಾದ ವ್ಯಕ್ತಪಡಿಸಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪಕ್ಷದ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇಂದು ಪಕ್ಷದ ಮುಖಂಡರೊಡನೆ ಚರ್ಚಿಸಿ ಹಲವಾರು ಮಹತ್ವದ ವಿಷಯಗಳ ಕುರಿತಾಗಿ ನಿರ್ಣಯ ತೊಗೆದುಕೊಳ್ಳಬೇಕಿತ್ತು. ಆದರೆ ಅನಾರೋಗ್ಯದಿಂದಾಗಿ ಯಾವುದೇ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ದೆಹಲಿಯ ಪ್ರತಿಯೊಂದು ಮನೆಗೆ ದಿನನಿತ್ಯ 700 ಲೀಟರ್ ಉಚಿತ ನೀರು ಪೂರೈಕೆ ಬಗ್ಗೆ ತುರ್ತಾಗಿ ಆದೇಶ ಕೈಗೊಳ್ಳಬೇಕಿತ್ತು. ಇದಕ್ಕಾಗಿ ಸಂಜೆ 4 ಗಂಟೆಗೆ ಜಲ ಮಂಡಳಿಯ ಸಭೆಯನ್ನು ಕರೆಯಲಾಗಿತ್ತು. ಆದರೆ ನಿನ್ನೆಯಿಂದಲೇ ಕೇಜ್ರಿವಾಲ್ ಅವರು ನಿಷಕ್ತರಾಗಿದ್ದು, ಇಂದು ಅವರು 102 ಡಿಗ್ರಿಯಷ್ಟು ಜ್ವರದಿಂದ ಬಳಲುತ್ತಿದ್ದಾರೆ.

ಕೇಜ್ರಿವಾಲ್‌ರನ್ನು ಪರೀಕ್ಷಿಸಿದ ವೈದ್ಯರು, ಅವರು 102 ಡಿಗ್ರಿಯಷ್ಟು ಜ್ವರದಿಂದ ಬಳಲುತ್ತಿದ್ದು, ಅವರಿಗೆ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement