ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಹೊಸ ವರ್ಷಕ್ಕೆ ಆಪ್‌ನಿಂದ ಬಂಪರ್ ಕೊಡುಗೆ: ಜ.1ರಿಂದ ಉಚಿತ ನೀರು

ಹೊಸ ವರ್ಷಕ್ಕೆ ದೆಹಲಿ ಜನತೆಗೆ ಬಂಪರ್ ಕೊಡುಗೆ ನೀಡಿರುವ ಆಮ್ ಆದ್ಮಿ ಪಕ್ಷ(ಎಎಪಿ)ದ ಸರ್ಕಾರ, ಜನವರಿ 1ರಿಂದಲೇ ದೆಹಲಿ ನಾಗರಿಕರಿಗೆ ಉಚಿತವಾಗಿ ನೀರು ಪೂರೈಕೆ..

Lingaraj Badiger
Updated On : 30 Dec 2013, 6:14 am

ನವದೆಹಲಿ: ಹೊಸ ವರ್ಷಕ್ಕೆ ದೆಹಲಿ ಜನತೆಗೆ ಬಂಪರ್ ಕೊಡುಗೆ ನೀಡಿರುವ ಆಮ್ ಆದ್ಮಿ ಪಕ್ಷ(ಎಎಪಿ)ದ ಸರ್ಕಾರ, ಜನವರಿ 1ರಿಂದಲೇ ದೆಹಲಿ ನಾಗರಿಕರಿಗೆ ಉಚಿತವಾಗಿ ನೀರು ಪೂರೈಕೆ ಮಾಡಲು ನಿರ್ಧರಿಸಿದೆ.

ಅನಾರೋಗ್ಯದ ನಡುವೆಯೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ತಮ್ಮ ನಿವಾಸದಲ್ಲಿ ದೆಹಲಿ ಜಲ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಜನವರಿ 1ರಿಂದ ಮಾರ್ಚ್ 31ರವರೆಗೆ ಪ್ರತಿ ಕುಟುಂಬಕ್ಕೆ ಪ್ರತಿ ದಿನ 666 ಲೀಟರ್ ಉಚಿತ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಆಮ್ ಆದ್ಮಿ ಸರ್ಕಾರ ಈಡೇರಿಸಿದೆ.

ಮುಂದಿನ ಮೂರು ತಿಂಗಳವರಗೆ ಕುಟುಂಬಕ್ಕೆ ಪ್ರತಿ ದಿನಕ್ಕೆ 666 ಲೀಟರ್ ನೀರು ಉಚಿತವಾಗಿ ನೀಡಲಾಗುವುದು. 666 ಲೀಟರ್‌ಗಿಂತ ಹೆಚ್ಚು ನೀರು ಬಳಸಿದರೆ, ಅದಕ್ಕೆ ಹಣ ನೀಡ ಬೇಕಾಗುತ್ತದೆ ಎಂದು ದೆಹಲಿ ಜಲ ಮಂಡಳಿ ಸಿಇಒ ವಿಜಯ್ ಕುಮಾರ್ ಅವರು ತಿಳಿಸಿದ್ದಾರೆ.

ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ದೆಹಲಿ ಜನತೆಗೆ ಉಚಿತವಾಗಿ ನೀರು ನೀಡಲಾಗಿದ್ದು, ಶೀಘ್ರದಲ್ಲೇ ವಿದ್ಯುತ್ ದರ ಕಡಿತಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಎಪಿ ನಾಯಕ ಕುಮಾರ್ ವಿಶ್ವಾಸ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement