ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ
ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ...
ನವದೆಹಲಿ: ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ.
ನ್ಯೂಜಿಲೆಂಡ್‌ನಲ್ಲಿ ಜನವರಿ 19 ರಿಂದ ಆರಂಭವಾಗಲಿರುವ ಏಕದಿನ ಪಂದ್ಯ ಹಾಗೂ ಫೆಬ್ರವರಿ 6 ರಿಂದ ನಡೆಯಲಿರುವ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ ಪ್ರಕಟವಾಗಿದೆ.
ಟೆಸ್ಟ್ ಮತ್ತು ಏಕದಿನ ಪಂದ್ಯದಿಂದ ಯುವರಾಜ್ ಸಿಂಗ್‌ಗೆ ಕೊಕ್ ನೀಡಲಾಗಿದೆ. ಆಸ್ಟ್ರೇಲಿಯ ವಿರುದ್ಧದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಯುವರಾಜ್‌ಸಿಂಗ್ ಅವರನ್ನು ನ್ಯೂಜಿಲೆಂಡ್ ಪ್ರವಾಸದಿಂದ ಬಿಸಿಸಿಐ ದೂರವಿಡಲು ತೀರ್ಮಾನಿಸಿದೆ.
ಇದೇ ಮೊದಲ ಬಾರಿಗೆ ಕರ್ನಾಟಕದ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿಗೆ ತಂಡದಲ್ಲಿ ಸ್ಧಾನ ನೀಡಲಾಗಿದೆ. ಡೊಮ್ಯಾಸ್ಟಿಕ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ವೇಗಿ ಈಶ್ವರ್ ಪಾಂಡೆಗೂ ಸಹ ತಂಡದಲ್ಲಿ ಸ್ಥಾನ ನೀಡಿದೆ.
ನ್ಯೂಜಿಲೆಂಡ್ ವಿರುದ್ಧ 5 ಏಕದಿನ ಪಂದ್ಯ ಮತ್ತು 2 ಟೆಸ್ಟ್ ಪಂದ್ಯಗಳು ನಡೆಯಲಿದೆ.
ಏಕದಿನ ಪಂದ್ಯದ ವೇಳಾಪಟ್ಟಿ:
ಜ. 19 ನೇಪಿಯರ್
ಜ.22 ಹಮೀಲ್ಟನ್
ಜ.25 ಆಕ್ಲೆಂಡ್
ಜ.28 ಹಮೀಲ್ಟನ್
ಜ.31 ವೇಲ್ಲಿಂಗ್‌ಟನ್
ಟೆಸ್ಟ್ ವೇಳಾಪಟ್ಟಿ:
ಫೆ.6 ಆಕ್ಲೆಂಡ್
ಫೆ.14 ವೇಲ್ಲಿಂಗ್‌ಟನ್
ತಂಡದ ಆಟಗಾರರ ವಿವರ:
ಎಂ.ಎಸ್. ಧೋನಿ(ನಾಯಕ)
ಶಿಖರ್ ಧವನ್
ಮುರಳಿ ವಿಜಯ್
ಚೇತೇಶ್ವರ್ ಪೂಜಾರಾ
ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ
ಅಜಿಂಕ್ಯಾ ರಹಾನೆ
ರವೀಂದ್ರ ಜಡೇಜ
ಅಂಬಟಿ ರಾಯುಡು
ಜಹೀರ್ ಖಾನ್
ಮಹಮದ್ ಶಮಿ
ಇಶಾಂತ್ ಶರ್ಮಾ
ಭುವನೇಶ್ವರ್ ಕುಮಾರ್
ರವಿಚಂದ್ರನ್ ಅಶ್ವಿನ್
ಉಮೇಶ್ ಯಾದವ್
ವೃದ್ಧಿಮಾನ್ ಸಹಾ
ಈಶ್ವರ್ ಪಾಂಡೆ