ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪೂರ್ಣಾವಧಿ ಅಧಿಕಾರ ಪೂರೈಸಲಿರುವ ಪ್ರಧಾನಿ ಸಿಂಗ್ : ಪಿಎಂಒ ಸ್ಪಷ್ಟನೆ

ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜಿನಾಮೆ ನೀಡುತ್ತಾರೆ ಎಂಬ ವಿಚಾರಕ್ಕೆ ತೆರೆ ಎಳೆದಿರುವ ಪ್ರಧಾನಿ ಕಚೇರಿ(ಪಿಎಂಒ) ಪ್ರಧಾನಿ...

Vishwanath S
Updated On : 31 Dec 2013, 6:02 am

ನವದೆಹಲಿ: ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜಿನಾಮೆ ನೀಡುತ್ತಾರೆ ಎಂಬ ವಿಚಾರಕ್ಕೆ ತೆರೆ ಎಳೆದಿರುವ ಪ್ರಧಾನಿ ಕಚೇರಿ(ಪಿಎಂಒ), ಪ್ರಧಾನಿ ಸಿಂಗ್ ಅವರು ಪೂರ್ಣಾವಧಿ ಅಧಿಕಾರವನ್ನು ಪೂರೈಸುತ್ತಾರೆ ಎಂದು ಮಂಗಳವಾರ ಸ್ಪಷ್ಟಪಡಿಸಿದೆ.

ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತಾರೆ ಎಂಬುದು ಬರೀ ಊಹಾಪೋಹವಾಗಿದೆ. ಪ್ರಧಾನಿ ಅವರಿಗೆ ಅಧಿಕಾರದಿಂದ ಕೆಳಗಿಳಿಯುವ ಯಾವುದೇ ಉದ್ದೇಶವಿಲ್ಲ ಎಂದು ಪಿಎಂಒ ಹೇಳಿದೆ.

ಈ ಊಹಾಪೋಹಕ್ಕೆ ಪ್ರಧಾನಿ ಸಿಂಗ್ ಅವರು ಜನವರಿ 3ರಂದು ಕರೆದಿರುವ ಪತ್ರಿಕಾಗೋಷ್ಠಿ ಕಾರಣವಾಗಿತ್ತು. ಲೋಕಸಭಾ ಚುನಾವಣೆ ಅಂಗವಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹಾದಿ ಸುಗಮಗೊಳಿಸಲು ಪ್ರಧಾನಿ ಹುದ್ದೆಯಿಂದ ಸಿಂಗ್ ಕೆಳಗಿಳಿಯಲಿದ್ದಾರೆ ಎಂಬ ಮಾಧ್ಯಮದ ವರದಿಯೊಂದು ಊಹಾಪೋಹಕ್ಕೆ ಕಾರಣವಾಗಿತ್ತು.

ಜ.3ರಂದು ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಅವರು ಯುಪಿಎ ಸರ್ಕಾರದ ಸಾಧನೆಗಳನ್ನು ವಿವರಿಸಲಿದ್ದಾರೆ. ಇದು ಪ್ರಸಕ್ತ ಅವಧಿಯಲ್ಲಿ ಪ್ರಧಾನಿ ಕರೆದಿರುವ ಮೂರನೇ ಪತ್ರಿಕಾಗೋಷ್ಠಿ ಎಂದು ಪಿಎಂಒ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement