4 ಶಂಕಿತ ಸಿಮಿ ಉಗ್ರರ ಬಂಧನ
ಸಿಮಿ ಸಂಘನೆಗೆ ಸೇರಿದ ನಾಲ್ವರು ಶಂಕಿತ ಉಗ್ರರನ್ನು ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ...
ಭೂಪಾಲ್: ಸಿಮಿ ಸಂಘನೆಗೆ ಸೇರಿದ ನಾಲ್ವರು ಶಂಕಿತ ಉಗ್ರರನ್ನು ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಮಧ್ಯಪ್ರದೇಶದ ಉಜ್ಜೈನ್ನಲ್ಲಿ ಎಟಿಎಸ್ ಅಧಿಕಾರಿಗಳು ನಾಲ್ವರು ಉಗ್ರರನ್ನು ಬಂಧಿಸಿದ್ದು, ಅವರಿಂದ ಅಪಾರ ಮೊತ್ತದ ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಶಂಕಿತ ಉಗ್ರರನ್ನು ಜಾವೀದ್ ನಗೋರಿ, ಅಬ್ದುಲ್ ಅಸೀಸ್, ಮಹಮದ್ ಅದಿಲ್ ಮತ್ತು ಅಬ್ದುಲ್ ವಾಹಿ ಎಂದು ಗುರುತಿಸಲಾಗಿದೆ ಎಂದು ಎಟಿಎಸ್ ಹಿರಿಯ ಮುಖ್ಯಸ್ಥ ಮತ್ತು ಪೊಲೀಸ್ ಅಧಿಕಾರಿ ಸಂಜೀವ್ ಶಮೀ ಅವರು ತಿಳಿಸಿದ್ದಾರೆ.
ಬಂಧನದ ವೇಳೆ ಶಂಕಿತ ಉಗ್ರರಿಂದ 12 ಕಚ್ಚಾ ಬಾಂಬ್, 900 ಜಿಲೇಟಿನ್ ಕಡ್ಡಿ ಮತ್ತು 600 ಸ್ಫೋಟಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಂಧಿತರನ್ನು ವಿಚಾರಣೆ ನಡೆಸುತ್ತಿರುವುದಾಗಿ ಶಮೀ ತಿಳಿಸಿದ್ದಾರೆ.
ಕಳೆದ ವಾರವಷ್ಟೇ ರಾಜ್ಯ ಭಯೋತ್ಪಾದನ ನಿಗ್ರಹ ದಳ ಐವರು ಶಂಕಿತ ಉಗ್ರರನ್ನು ಬಾರ್ವಾನಿ ಜಿಲ್ಲೆಯ ಸೇಂದ್ವರ ಪತಾರ್ ಎಂಬಲ್ಲಿ ಬಂಧಿಸಿತ್ತು.