ಆಗಸ್ಟಾ ವೆಸ್ಟ್ಲ್ಯಾಂಡ್ ಜತೆಗಿನ ಒಪ್ಪಂದಕ್ಕೆ ಭಾರತ ನಕಾರ
ಅತಿಗಣ್ಯರ ಪ್ರಯಾಣಕ್ಕಾಗಿ ಭಾರತೀಯ ವಾಯುಪಡೆಗೆ (ಐಎಎಫ್) 12 ಹೆಲಿಕಾಪ್ಟರ್ ಪೂರೈಕೆಗೆ ರು.3,727 ಕೋಟಿ ಒಪ್ಪಂದ ಮಾಡಿರುವ ...
ನವದೆಹಲಿ: ಅತಿಗಣ್ಯರ ಪ್ರಯಾಣಕ್ಕಾಗಿ ಭಾರತೀಯ ವಾಯುಪಡೆಗೆ (ಐಎಎಫ್) 12 ಹೆಲಿಕಾಪ್ಟರ್ ಪೂರೈಕೆಗೆ ರು.3,727 ಕೋಟಿ ಒಪ್ಪಂದ ಮಾಡಿರುವ ಇಟಲಿಯ ವಿವಾದಿತ ಕಂಪನಿ ಆಗಸ್ಟಾ ವೆಸ್ಟ್ಲ್ಯಾಂಡ್ನ ಒಪ್ಪಂದವನ್ನು ಭಾರತ ನಿರಾಕರಿಸಿದೆ.
ಭಾರತಕ್ಕೆ ಕಾಪ್ಟರ್ ಗುತ್ತಿಗೆ ಪಡೆದುಕೊಳ್ಳಲು ರು.375 ಕೋಟಿ. ರು ಲಂಚ ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಭಾರತ ಆಗಸ್ಟಾ ವೆಸ್ಟ್ಲ್ಯಾಂಡ್ ಕಂಪನಿಯೊಂದಿನ ಒಪ್ಪಂದವನ್ನು ರದ್ದು ಮಾಡಲು ನಿರ್ಧರಿಸಿತ್ತು.
ಐಎಎಫ್ನ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ಅವರ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿದ್ದು, ಈ ಬಗ್ಗೆ ಸಿಬಿಐ ತನಿಖೆ ಮುಂದುವರಿದಿದೆ.
ಆಗಸ್ಟಾ ಕಂಪನಿಯ ಜತೆಗಿನ ಒಪ್ಪಂದವನ್ನು ನಿರಾಕರಿಸುವ ಬಗ್ಗೆ ರಕ್ಷಣಾ ಸಚಿವ ಎಕೆ ಆ್ಯಂಟನಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಬೆಳಗ್ಗೆ ಮಾತುಕತೆ ನಡೆಸಿದ್ದರು ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.
12 ಹೆಲಿಕಾಪ್ಟರ್ಗಳ ಪೂರೈಕೆ ಬಗ್ಗೆ ಒಪ್ಪಂದವಾಗಿದ್ದು, ಇದರಲ್ಲಿ ಮೂರು ಹೆಲಿಕಾಪ್ಟರ್ಗಳನ್ನು ಈಗಾಗಲೇ ಆಗಸ್ಟಾ ವೆಸ್ಟ್ಲ್ಯಾಂಡ್ ಪೂರೈಕೆ ಮಾಡಿತ್ತು.