ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಶಾಸಕರಾಗಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕಾರ

ದೆಹಲಿ ವಿಧಾನಸಭೆಯ ಪ್ರಥಮ ಅಧಿವೇಶನ ಬುಧವಾರ ಆರಂಭವಾಗಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅವರ ಸಚಿವ ಸಂಪುಟ...

Rashmi Kasaragodu
Updated On : 1 Jan 2014, 4:16 am

ನವದೆಹಲಿ: ದೆಹಲಿ ವಿಧಾನಸಭೆಯ ಪ್ರಥಮ ಅಧಿವೇಶನ ಬುಧವಾರ ಆರಂಭವಾಗಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅವರ ಸಚಿವ ಸಂಪುಟದ ಸಚಿವರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸ್ಪೀಕರ್ ಮಟೀನ್ ಅಹ್ಮದ್ ಅವರಿಂದ ಕೇಜ್ರಿವಾಲ್ ಪ್ರತಿಜ್ಞಾವಿಧಿ ಸ್ವೀಕರಿಸಿದ್ದು, ಇವರ ನಂತರ ಮನೀಶ್ ಸಿಸೋಡಿಯಾ ಮತ್ತು ಇತರರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ ನಂತರ ಕೇಜ್ರಿವಾಲ್ ಬಿಜೆಪಿ ನೇತಾರ ಹರ್ಷ ವರ್ಧನ್ ಅವರಿಗೆ ಹಸ್ತಲಾಘವ ಮಾಡಿದ್ದಾರೆ.

ಜನವರಿ 7ರ ವರೆಗೆ ದೆಹಲಿ ವಿಧಾನಸಭೆಯ ಪ್ರಥಮ ಅಧಿವೇಶನ  ನಡೆಯಲಿದೆ. ಅದೇ ವೇಳೆ ಕೇಜ್ರಿವಾಲ್ ಸರ್ಕಾರ ನಾಳೆ ವಿಶ್ವಾಸ ಮತ ಯಾಚಿಸಲಿದೆ.

ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಚುನಾವಣೆ ಜನವರಿ 3ರಂದು ನಡೆಯಲಿದೆ.

ಲೆ.ಗವರ್ನರ್ ನಜೀಬ್ ಜಂಗ್ ಜನವರಿ 6 ರಂದು ಅಧಿವೇಶನವನ್ನುದ್ದೇಶಿಸಿ ಮಾತಾಡಲಿದ್ದು, 7ರಂದು ಈ ಭಾಷಣದ ಬಗ್ಗೆ ಚರ್ಚೆ ನಡೆಯಲಿದೆ.

ಆಮ್ ಆದ್ಮಿ ಪಕ್ಷ ಶಾಸಕ ಎಂಎಸ್ ಧೀರ್ ಅವರ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement