ಸಾಮೂಹಿಕ ಅತ್ಯಾಚಾರ: 6 ಬಂಧನ
ಕೊಲ್ಕತ್ತಾದಲ್ಲಿ 16 ರ ಬಾಲಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮಂಗಳವಾರ ಅಸುನೀಗಿದ ಹಿನ್ನೆಲೆಯಲ್ಲಿ, ಬಾಲಕಿ...
ಕೊಲ್ಕತ್ತಾ: ಕೊಲ್ಕತ್ತಾದಲ್ಲಿ 16 ರ ಬಾಲಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮಂಗಳವಾರ ಅಸುನೀಗಿದ ಹಿನ್ನೆಲೆಯಲ್ಲಿ, ಬಾಲಕಿಯ ಕುಟುಂಬದವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.
ಅತ್ಯಾಚಾರ್ಕಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ ಎರಡು ತಿಂಗಳುಗಳ ಕಾಲ ಜೀವನ್ಮರಣ ಹೋರಾಟ ಮಾಡಿ ಮಂಗಳವಾರ ಸಾವನ್ನಪ್ಪಿದ್ದಳು. ತನ್ನ ಮಗಳ ಸಾವಿಗೆ ಆರ್ ಜಿ ಕಾರ್ ಮೆಡಿಕಲ್ ಆಸ್ಪತ್ರೆಯ ನೌಕರರು ಸರಿಯಾದ ಚಿಕಿತ್ಸೆ ನೀಡದೆ ಇರುವುದೇ ಕಾರಣ ಎಂದು ಬಾಲಕಿಯ ಅಪ್ಪ ದೂರಿದ್ದಾರೆ.
ಅಕ್ಟೋಬರ್ 25ರಂದು ಅತ್ಯಾಚಾರಕ್ಕೊಳಗಾದ ಬಾಲಕಿಗೆ ಅತ್ಯಾಚಾರಿಗಳು ಬೆದರಿಕೆಯೊಡ್ಡಿದ್ದ ಕಾರಣ ಆಕೆ ಡಿಸೆಂಬರ್ 23ರಂದು ಕಿಚ್ಚಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಳು. ಶೇ. 40 ಸುಟ್ಟಗಾಯಗಳೊಂದಿಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ನಿನ್ನೆ ಸಾವಿಗೀಡಾಗಿದ್ದಳು.
ಆ ಪ್ರಕರಣವು ಇದೀಗ ರಾಜಕೀಯ ಜಟಾಪಟಿಯತ್ತ ತಿರುಗಿದ್ದು, ಸಿಪಿಎಂ ತೃಣಮೂಲ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದೆ.
ಆದಾಗ್ಯೂ, ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಾಗಲೇ 6 ಮಂದಿಯನ್ನು ಬಂಧಿಸಲಾಗಿದೆ.