ಪಾಕ್ ಸೇನಾ ನೆಲದ ಮೇಲೆ ತಾಲಿಬಾನ್ ದಾಳಿ: 23 ಸಾವು
ಪೇಶಾವರ್: ಪಾಕಿಸ್ತಾನದ ಈಶಾನ್ಯ ದಿಕ್ಕಿನಲ್ಲಿರುವ ಪಾಕ್ ಸೇನಾ ನೆಲದ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡಿದ ಪರಿಣಾಮ 23ಜನ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ಆತ್ಮಾಹುತಿ ಬಾಂಬ್ ಸ್ಫೋಟ ಮತ್ತು ಗುಂಡು ಹಾರಿಸಿದ ಪರಿಣಾಮ 10 ಜನ ನಾಗರಿಕರು ಸೇರಿದಂತೆ ಸೇನಾ ಅಧಿಕಾರಿಗಳು ಘಟನೆಯಲ್ಲಿ ಮೃತಪಟ್ಟಿದ್ದು, ದಾಳಿ ನಡೆಸಿದ 12 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಇಬ್ಬರು ಅಧಿಕಾರಿಗಳು, 9 ಜನ ಸೈನಿಕರು ಸೇರಿದಂತೆ ಮಹಿಳೆ ಮತ್ತು ಮಕ್ಕಳನ್ನು ಉಗ್ರರು ಕೊಂದು ಹಾಕಿದ್ದಾರೆ.
ದೇಶದಲ್ಲಿ ಬಾಂಬ್ ದಾಳಿ ಮುಂದುವರೆದಿದ್ದು, ಪಾಕಿಸ್ತಾನದ ಜನರನ್ನು ಆತಂಕಕ್ಕೊಳಪಡಿಸಿದೆ. ನಿನ್ನೆಯಷ್ಟೆ ಶಿಯಾ ಮುಸ್ಲಿಂ ಮಸೀದಿ ಮೇಲೆ ಉಗ್ರರು ದಾಳಿ ನಡೆಸಿ, 24 ಜನರು ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ.