ಫೆ.5 ರಂದು ಅಮೇತಿಗೆ ರಾಹುಲ್ ಭೇಟಿ
ನವದೆಹಲಿ: ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿ ನೇಮಕವಾದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಅಮೇತಿಗೆ ಭೇಟಿ ನೀಡಲಿದ್ದಾರೆ.
ಫೆಭ್ರವರಿ 5ರಂದು ಭೇಟಿ ನೀಡಲಿರುವ ರಾಹುಲ್ ಎರಡು ದಿನ ಅಲ್ಲೇ ತಂಗಲಿದ್ದು, ಪಕ್ಷದ ಮುಖಂಡರೊಂದಿಗೆ ಹಾಗೂ ಯುವ ನಾಯಕರೊಡನೆ ಚರ್ಚೆ ನಡೆಸಲಿದ್ದಾರೆ.