ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಂತೋಷ್ ಹೆಗ್ಡೆಗೆ ಗೋವಾ ಸಿಎಂ 'ಅಪಮಾನ': ಐಎಸಿ ಕಿಡಿ

Mainashree
Updated On : 2 Feb 2013, 5:43 am

ಪಣಜಿ: ಕರ್ನಾಟಕದ ಮಾಜಿ ಲೋಕಾಯುಕ್ತ ಹಾಗೂ ನಿವೃತ್ತ ನ್ಯಾಯಾಮೂರ್ತಿ ಸಂತೋಷ್ ಹೆಗಡೆ ಅವರನ್ನು ಅಪಮಾನ ಮಾಡಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕರ್ ವಿರುದ್ಧ ಭ್ರಷ್ಟಾಚಾರ ವಿರೋಧಿ ಭಾರತ ಸಂಘಟನೆ ಶನಿವಾರ ಕಿಡಿ ಕಾರಿದೆ.

ಇನ್ನೋಬ್ಬರ ಬಗ್ಗೆ ಹೇಳಿಕೆ ನೀಡಬೇಕಾದರೆ ಮೊದಲು ಅವರು ತಮ್ಮ ಸ್ಥಾನವನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡಬೇಕು ಎಂದು ಐಎಸಿ ಆಕ್ರೋಶ ವ್ಯಕ್ತಪಡಿಸಿದೆ.

ಇತ್ತೀಚೆಗಷ್ಟೆ ನಿವೃತ್ತ ನ್ಯಾ.ಸಂತೋಷ್ ಹೆಗಡೆ ಅವರು ಗೋವಾ ಸರ್ಕಾರ ಅಲ್ಲಿನ ಲೋಕಾಯುಕ್ತ ಕಾನೂನನ್ನು ದುರ್ಬಲಗೊಳಿಸುತ್ತಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ಗೋವಾ ಮುಖ್ಯಮಂತ್ರಿ ಪಾರಿಕರ್ ಹೆಗ್ಡೆ ಅವರು ಮೊದಲು ತಮ್ಮ ಸ್ಥಾನಮಾನದ ಬಗ್ಗೆ ನೋಡಿಕೊಂಡು ಮಾತಾಡಬೇಕು, ಕೂಡಲೇ ಅವರು ಗೋವಾ ಸರ್ಕಾರವನ್ನು ಕ್ಷಮೆಯಾಚಿಸಬೇಕು. ಐಎಸಿ ಸದಸ್ಯರು ಅವರನ್ನು ಹಾದಿ ತಪ್ಪಿಸಿದ್ದಾರೆ. ಬೇಕಾದರೆ ಹೆಗ್ಡೆ ಅವರು ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದರು.

ಗೋವಾ ಸಿಎಂರ ಕಠಿಣ ಮಾತಿಗೆ ಆಕ್ರೋಶ ವ್ಯಕ್ತಪಡಿಸಿರುವ ಐಎಸಿ, ಮೊದಲು ಗೋವಾ ಮುಖ್ಯಮಂತ್ರಿಗಳು ತಮ್ಮ ಸ್ಥಾನವನ್ನು ಗಣನೆಗೆ ತೆಗೆದು ಕೊಂಡು ಮಾತನಾಡಲಿ. ನಾವು ಸಂತೋಷ್ ಹೆಗ್ಡೆ ಅವರನ್ನು ದಾರಿ ತಪ್ಪಿಸಿಲ್ಲ. ಗೋವಾ ಸರ್ಕಾರ ಭ್ರಷ್ಟತೆಗೆ ಹೆಚ್ಚು ಸಹಕರಿಸುತ್ತಿದೆ. ಒಬ್ಬ ನಿವೃತ್ತ ನ್ಯಾಯಾಮೂರ್ತಿಗಳ ಬಗ್ಗೆ ಮಾತಾಡಬೇಕಾದರೆ ಅವರಿಗೆ ಯೋಗ್ಯತೆ ಬೇಕು ಎಂದು ಕಿಡಿಕಾರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement