ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಹಿಂದಿ 'ವಿಶ್ವರೂಪಂ'ಗೆ ಉತ್ತಮ ಪ್ರತಿಕ್ರಿಯೆ: ಕಮಲ್ ದಿಲ್‌ಖುಷ್

ಉತ್ತರ ಭಾರತದಾದ್ಯಂತ ಶುಕ್ರವಾರ 1000 ಚಿತ್ರ ಮಂದಿರಗಳಲ್ಲಿ ತರೆಕಂಡ 'ವಿಶ್ವರೂಪಂ'ನ ಹಿಂದಿ ಆವೃತ್ತಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ...

Lingaraj Badiger
Updated On : 2 Feb 2013, 5:06 am

ಚೆನ್ನೈ: ಉತ್ತರ ಭಾರತದಾದ್ಯಂತ ಶುಕ್ರವಾರ 1000 ಚಿತ್ರ ಮಂದಿರಗಳಲ್ಲಿ ತರೆಕಂಡ 'ವಿಶ್ವರೂಪಂ'ನ ಹಿಂದಿ ಆವೃತ್ತಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗ ಚಿತ್ರದ ನಟ, ನಿರ್ದೇಶಕ ಕಮಲಹಾಸನ್ ಅವರು ಖುಷಿ ಮೂಡ್‌ನಲ್ಲಿದ್ದಾರೆ.

ಈ ಬಗ್ಗೆ ಶನಿವಾರ ವರದಿಗಾರರಿಗೆ ಪ್ರತಿಕ್ರಿಯಿಸಿರುವ ಕಮಲ್, ಉತ್ತರ ಭಾರತದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಚಿತ್ರದ ಪ್ರಚಾರಾರ್ಥವಾಗಿ ಜನವರಿ 31ರಿಂದ ಮುಂಬೈಯಲ್ಲಿದ್ದ ಕಮಲ್ ಇಂದು ಚೆನ್ನೈಗೆ ಆಗಮಿಸಿದ್ದು, ತಮಿಳು ನಾಡಿನಲ್ಲಿ ವಿಶ್ವರೂಪಂ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಸಂಬಂಧ ಮುಸ್ಲಿಂ ಸಂಘಟನೆಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.

ನಿನ್ನೆಯಷ್ಟೇ ಕಮಲ್ ಅವರ ಸಹೋದರ ಚಂದ್ರಹಾಸನ್ ಅವರು, ರಾಜ್ಯ ಗೃಹ ಕಾರ್ಯದರ್ಶಿ ಆರ್ ರಾಜಗೋಪಾಲ್ ಅವರ ನೇತೃತ್ವದಲ್ಲಿ ಮುಸ್ಲಿಂ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ ಮುಸ್ಲಿಂ ಸಂಘಟನೆಗಳ ಮುಖಂಡರು ವಿವಾದಿತ 9 ನಿಮಿಷಗಳ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಸ್ವತಃ ಕಮಲಹಾಸನ್ ಅವರೊಂದಿಗೆ ವಿವಾದದ ಕುರಿತು ಮಾತುಕತೆ ನಡೆಸುವ ಅಭಿಪ್ರಾಯ ವ್ಯಕ್ತಪಡಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement