ಈ ಬಾರಿಯೂ ಮಠಗಳಿಗೆ ಬಂಪರ್ ಕೊಡುಗೆ
ಮಠಾಧೀಪತಿಗಳ ಹಲವು ನೀರಿಕ್ಷೆಗಳಂತೆ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಶೆಟ್ಟರ್ , ರಾಜ್ಯದ ವಿವಿಧ ಮಠಗಳಿಗೆ ಒಟ್ಟು 100 ಕೋಟಿ ರುಪಾಯಿ ಬಂಪರ್ ಕೊಡುಗೆ ನೀಡಿದ್ದಾರೆ.
ಬೆಂಗಳೂರು: ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶುಕ್ರವಾರ ಮಂಡಿಸಿದ್ದು, ಮಠಗಳಿಗೆ ಭಾರಿ ಅನುದಾನ ನೀಡುವ ಮಾಜಿ ಮುಖ್ಯಮಂತ್ರಿಯ ಬಿ.ಎಸ್. ಯಡಿಯೂರಪ್ಪ ಅವರ ಸಂಪ್ರದಾಯವನ್ನು ಶೆಟ್ಟರ್ ಅವರು ಮುಂದುವರೆಸಿದ್ದು, ಇಂದು ಮಂಡನೆಯಾದ 2013-2014ನೇ ಸಾಲಿನ ಬಜೆಟ್ನಲ್ಲೂ ಮಠಗಳಿಗೆ ಬಂಪರ್ ಕೊಡುಗೆ ನೀಡಿದ್ದಾರೆ.
ಮಠಾಧೀಪತಿಗಳ ಹಲವು ನೀರಿಕ್ಷೆಗಳಂತೆ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಶೆಟ್ಟರ್ ಅವರು, ರಾಜ್ಯದ ವಿವಿಧ ಮಠಗಳಿಗೆ ಒಟ್ಟು 100 ಕೋಟಿ ರುಪಾಯಿ ಬಂಪರ ಕೊಡುಗೆ ನೀಡಿದ್ದಾರೆ.
ಅನುದಾನ ಪಡೆದ ಮಠಗಳ ವಿವರ
- ಶಿರಸಿಯ ಸ್ವರ್ಣವಲ್ಲಿ ಮಠಕ್ಕೆ-2 ಕೋಟಿ.
- ಸಿದ್ಧಗಂಗಾ ಮಠಕ್ಕೆ-5 ಕೋಟಿ
- ಚಿತ್ರದುರ್ಗ ಮುರುಘಾಮಠಕ್ಕೆ 3- ಕೋಟಿ
- ಹುಬ್ಬಳ್ಳಿಯ ಮುರುಸಾವಿರ ಮಠಕ್ಕೆ- 2.50 ಕೋಟಿ
- ಕೂಡಲ ಸಂಗಮ ಪಂಚಮ ಪೀಠಕ್ಕೆ -5 ಕೋಟಿ
- ಹರಿಹರಪುರದ ಶ್ರೀಮಠಕ್ಕೆ 1 -ಕೋಟಿ
- ಧಾರವಾಡದ ಮುರುಘಾ ಮಠಕ್ಕೆ- 2.50 ಕೋಟಿ
- ಮಾಚೇದೇವರ ಜನ್ಮಸ್ಥಳದ ಅಭಿವೃದ್ಧಿಗೆ 2 ಕೋಟಿ
- ಮಠಗಳು ನಡೆಸುವ ಶಿಕ್ಷಣ ಸಂಸ್ಧೆಗಳ ಸಮುದಾಯ ಭವನಕ್ಕೆ 75 ಲಕ್ಷ ರು.
- ಮೈಸೂರಿನಲ್ಲಿ ಬಸವ ಭವನ ನಿರ್ಮಾಣಕ್ಕೆ 2 ಕೋಟಿ
- ಆಧ್ಯಾತ್ಮ ಸಂಸತ್ ಭವನ ನಿರ್ಮಾಣಕ್ಕೆ 5 ಕೋಟಿ
- ಬೆಂಗಳೂರಿನ ಕೆಂಗೇರಿ ಬಳಿ ಬಸವ ಭವನ ನಿರ್ಮಾಣಕ್ಕೆ 1 ಕೋಟಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.