ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಿಎಂ ಶೆಟ್ಟರ್‌ರಿಂದ ಮೊದಲಿಗೆ ಕೃಷಿ ಬಜೆಟ್ ಮಂಡನೆ

ಇಂದು ಮಧ್ಯಾಹ್ನ 12.30ಕ್ಕೆ ಸಿಎಂ ಶೆಟ್ಟರ್ ಅವರು ತಮ್ಮ ಚೊಚ್ಚಲ ಹಾಗೂ ಬಿಜೆಪಿ ಸರ್ಕಾರದ 5ನೇ ಮತ್ತು ಕಡೆಯ ಬಜೆಟ್‌ನ್ನು ಮಂಡಿಸಿದರು.

Lingaraj Badiger
Updated On : 8 Feb 2013, 1:22 am

ಬೆಂಗಳೂರು: ರಾಜಕೀಯ ಆತಂಕಗಳ ನಡುವೆಯೂ ಎಲ್ಲ ಸಮೂದಾಯದ ಮೆಚ್ಚುಗೆ ಗಳಿಸುವ ಹಲವು ಜನಪ್ರಿಯ ಕಾರ್ಯಕ್ರಮಗಳೊಂದಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು 2013-14ನೇ ಸಾಲಿನ ಆಯವ್ಯಯವನ್ನು ಶುಕ್ರವಾರ ಮಂಡಿಸುತ್ತಿದ್ದಾರೆ.

ಇಂದು ಮಧ್ಯಾಹ್ನ 12.30ಕ್ಕೆ ಸಿಎಂ ಶೆಟ್ಟರ್ ಅವರು ತಮ್ಮ ಚೊಚ್ಚಲ ಹಾಗೂ ಬಿಜೆಪಿ ಸರ್ಕಾರದ 5ನೇ ಮತ್ತು ಕಡೆಯ ಬಜೆಟ್‌ನ್ನು ಮಂಡಿಸಿದರು. ಇದು ಚುನಾವಣಾ ಬಜೆಟ್ ಆಗಿರುವುದರಿಂದ ಎಲ್ಲ ವರ್ಗಗಳನ್ನು ಓಲೈಸುವ ಕೆಲಸವನ್ನು ಶೆಟ್ಟರ್ ಮಾಡುತ್ತಿದ್ದಾರೆ.

ಈ ಬಾರಿಯೂ ಮೊದಲಿಗೆ ಕೃಷಿ ಬಜೆಟ್ ಮಂಡಿಸಿದ ಶೆಟ್ಟರ್, ಸತತ 3ನೇ ಬಾರಿಗೆ ಬಿಜೆಪಿ ಸರ್ಕಾರ ಮಂಡಿಸುತ್ತಿರುವ ಕೃಷಿ ಬಜೆಟ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.

ಕೃಷಿ ಬಜೆಟ್‌ನ ಮುಖ್ಯಾಂಶಗಳು:
ಕೃಷಿ ಬಜೆಟ್ ಮೊತ್ತ 22,310  ಕೋಟಿ ರುಪಾಯಿ
ತೆಂಗು ಉತ್ಪನ್ನ ಉದ್ಯಾನ ಸ್ಥಾಪನೆಗೆ 25 ಕೋಟಿ ಮೀಸಲು
ಕಬ್ಬು, ಸಾಂಬಾರು ಬೆಳೆ ಹನಿ ನೀರಾವರಿಗೆ 25 ಕೋಟಿ ರು. ಸಹಾಯಧನ
ಹಾಪ್‌ಕಾಮ್ಸ್ ಅಭಿವೃದ್ಧಿಗೆ 50 ಕೋಟಿ
ಭತ್ತ ಕಟಾವು ಯಂತ್ರ ಖರೀದಿಗೆ 100 ಕೋಟಿ
ಸೌರ ಶಕ್ತಿ ಪಂಪ್‌ಸೆಟ್‌ಗಳಿಗೆ 50 ಕೋಟಿ
ಕೃಷಿ ಇಲಾಖೆ ಸಿಬ್ಬಂದಿಗೆ ತರಬೇತಿ, ತಾಂತ್ರಿಕ ಸೌಲಭ್ಯ ಸೇರಿದಂತೆ ಕೃಷಿ ಇಲಾಖೆ ಕಾರ್ಯಕ್ರಮಗಳಿಗೆ 3,091ಕೋಟಿ ಸಹಾಯಧನ
ಬೆಳೆ ವಿಮೆಗೆ 100 ಕೋಟಿ ಬಿಡುಗಡೆ, 57 ಲಕ್ಷ ರೈತರು ವಿಮಾ ವ್ಯಾಪ್ತಿಗೆ
ರೈತರ ಮೂಲ ಮಾಹಿತಿ ಹಾಗೂ ಪಾಸ್ ಬುಕ್ ವಿತರಣೆಗೆ 15 ಕೋಟಿ
ರೈತರ ಸಾಲ ಮನ್ನಾ ಮಾಡಲು 1521 ಕೋಟಿ
ಕೃಷಿ ಮತ್ತು ತೋಟಗಾರಿಕೆ ಅಭಿವೃದ್ಧಿಗೆ 4402 ಕೋಟಿ
ಪಶುಸಂಗೋಪನೆ ಮತ್ತು ಮೀನುಗಾರಿಕೆ ಅಭಿವೃದ್ಧಿಗೆ 1357 ಕೋಟಿ
ಮುಧೋಳದಲ್ಲಿ ಸಕ್ಕರೆ ತಾಂತ್ರಿಕ ಕಾಲೇಜ್ ಸ್ಥಾಪನೆ
ರೈತರಿಗೆ ಮೊಬೈಲ್ ಮಾಹಿತಿ ನೀಡುವ ಯೋಜನೆಗೆ 10 ಕೋಟಿ ರುಪಾಯಿ
ಶಿರಸಿ ಹಾಗೂ ಚಿಕ್ಕಮಗಳೂರಿನಲ್ಲಿ ಡೈರಿ ಘಟಕ ಸ್ಥಾಪನೆ
ಬೆಂಗಳೂರಿನ ಓಕಳಿಪುರಂನಲ್ಲಿ ರೇಷ್ಮೆ ಸಂಕೀರ್ಣ ನಿರ್ಮಾಣ
ಅಥಣಿಯ ಕಾಗವಾಡದಲ್ಲಿ ಅರಿಶಿಣ ಮತ್ತು ಒಣ ದ್ರಾಕ್ಷಿ ಮಾರುಕಟ್ಟೆ ನಿರ್ಮಾಣ
ದ್ರಾಕ್ಷಿ ಬೆಳೆ ಮಾರಾಟ ವ್ಯವಸ್ಥೆಗೆ ಇ-ಮಾರಾಟ ಕೇಂದ್ರ ಸ್ಥಾಪನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement