ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಅಫ್ಜಲ್ ಗಲ್ಲು'ಗೆ ಫೆ.4ರಂದೆ ಸಹಿ: ಶಿಂಧೆ

ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸುವ ಸಂಬಂಧ ಆತನ ಫೈಲಿಗೆ ಫೆಬ್ರವರಿ 4ರಂದೇ ಸಹಿ ಹಾಕಿದ್ದೆ ಎಂದು ಶನಿವಾರ ಗೃಹ..

Lingaraj Badiger
Updated On : 9 Feb 2013, 12:28 pm

ನವದೆಹಲಿ: ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸುವ ಸಂಬಂಧ ಆತನ ಫೈಲಿಗೆ ಫೆಬ್ರವರಿ 4ರಂದೇ ಸಹಿ ಹಾಕಿದ್ದೆ ಎಂದು ಶನಿವಾರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಹೇಳಿದ್ದಾರೆ.

ಇಂದು ಬೆಳಗ್ಗೆ 8 ಗಂಟೆಗೆ ದೆಹಲಿಯ ತಿಹಾರ್ ಜೈಲಿನಲ್ಲಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿರುವುದನ್ನು ಖಚಿತಪಡಿಸಿದ ಶಿಂಧೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಫೆಬ್ರವರಿ 3ರಂದು ಅಫ್ಜಲ್ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದ್ದರು. ನಂತರ ಅದನ್ನು ಪರಿಶೀಲಿ ಫೆ.4ರಂದು ಗಲ್ಲು ಶಿಕ್ಷೆ ಜಾರಿಗೊಳಿಸುವ ಫೈಲ್ಗೆ ಸಹಿ ಹಾಕಿ, ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇ ಎಂದು ಹೇಳಿದರು.

ಫೆ.4ರಂದೇ ಮುಂದಿನ ಕ್ರಮಕ್ಕೆ ನಾನು ಸೂಚಿಸಿದ್ದೇ. ಆದರೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲು ಫೆ.9ರಂದು ಸಮಯ ನಿಗದಿಪಡಿಸಲಾಯಿತು ಎಂದು ಶಿಂಧೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement