ಅಫ್ಜಲ್ ಗುರು ಅಮಾಯಕ: ಪಾಕ್ ಪತ್ರಕರ್ತ
ಅಫ್ಜಲ್ ಗುರು ಮುಗ್ಧ ಹಾಗೂ ಅಮಾಯಕ- ಅನ್ನೋದು ಪಾಕ್ ಪತ್ರಕರ್ತ ಹಮೀದ್ ಮೀರ್ ಅಭಿಪ್ರಾಯ.
ಇಸ್ಲಾಮಾಬಾದ್: ಅಫ್ಜಲ್ ಗುರು ಮುಗ್ಧ ಹಾಗೂ ಅಮಾಯಕ ಎಂದು ಪಾಕಿಸ್ತಾನದ ಪತ್ರಕರ್ತ ಹಾಗೂ ಸುದ್ದಿ ವಾಹಿನಿ ನಿರೂಪಕ ಹಮೀದ್ ಮೀರ್ ಶನಿವಾರ ಅಭಿಪ್ರಾಯ ಪಟ್ಟಿದ್ದಾರೆ.
ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ಇಂದು ಗಲ್ಲಿಗೇರಿಸಿದ ನಂತರ ಟ್ವೀಟ್ ಮಾಡಿರುವ ಹಮೀದ್, ಭಾರತ ಒಬ್ಬ ಮುಗ್ಧನನ್ನು ಗಲ್ಲಿಗೇರಿಸಿದೆ ಎಂದು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.
2001 ಡಿಸೆಂಬರ್ 13ರಂದು ಅಫ್ಜಲ್ ಗುರು ಹಾಗೂ ಪಾಕಿಸ್ತಾನ ಮೂಲದ ಭಯೋತ್ಪಾದಕರು ಶಸ್ತ್ರ ಸಜ್ಜಿತರಾಗಿ ಭಾರತದ ಶಕ್ತಿ ಕೇಂದ್ರ ಸಂಸತ್ ಮೇಲೆ ದಾಳಿ ನಡೆಸಿದ್ದರು. ದಾಳಿ ನಡೆದ ಸಂದರ್ಭದಲ್ಲಿ ಸಂಸತ್ ಭವನದಲ್ಲಿ 100 ಸಂಸದರು ಇದ್ದರು ಎಂದು ಹೇಳಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.