ಅಫ್ಜಲ್ ಗುರುಗೆ ಗಲ್ಲು: ಬಿಜೆಪಿ ಸ್ವಾಗತ
ಕೊನೆಗೂ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಪ್ರತಿಪಕ್ಷ ಬಿಜೆಪಿ, ತಡವಾಗಿಯಾದರೂ ಸಂಸತ್ ದಾಳಿಯ ರೂವಾರಿ..
ನವದೆಹಲಿ: ಕೊನೆಗೂ ಅಫ್ಜಲ್ ಗುರುವಿಗೆ ಗಲ್ಲಿಗೇರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಪ್ರತಿಪಕ್ಷ ಬಿಜೆಪಿ, ತಡವಾಗಿಯಾದರೂ ಸಂಸತ್ ದಾಳಿಯ ರೂವಾರಿ ಅಫ್ಜಲ್‌ಗೆ ನೇಣಿಗಾಕಿರುವುದು ಒಳ್ಳೆಯ ಕ್ರಮ ಎಂದು ಶನಿವಾರ ಹೇಳಿದೆ.
ಎಲ್ಲ ಪ್ರತಿಪಕ್ಷಗಳು ಸೇರಿದಂತೆ ದೇಶದ ಎಲ್ಲ ಜನತೆ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿ ಎಂದು ಒತ್ತಾಯಿಸಿದ್ದವು. ಆದರೆ ಅದು ವಿಳಂಬವಾಯಿತು. ಆದರೂ ಈಗ ಗಲ್ಲಿಗೇರಿಸಿರುವುದು ಸರಿಯಾದ ನಿರ್ಧಾರ ಎಂದು ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ಅವರು ಹೇಳಿದ್ದಾರೆ.
ಹತ್ತು ವರ್ಷಗಳ ಹಿಂದೆಯೇ ಅಫ್ಜಲ್‌ನನ್ನು ಗಲ್ಲಿಗೇರಿಸಬೇಕಿತ್ತು. ಆದರೆ ಸರ್ಕಾರದ ಮೇಲೆ ಒತ್ತಡವಿದ್ದ ಕಾರಣ ಗಲ್ಲು ತಡವಾಗಿದೆ. ಕಾನೂನು ಪ್ರಕಾರ ಅದು ಈಗ ಸಾಧ್ಯವಾಗಿದೆ ಎಂದು ಮತ್ತೊರ್ವ ಬಿಜೆಪಿ ನಾಯಕ ಪ್ರಕಾಶ್ ಜಾವೇಡಕರ್ ಅವರು ತಿಳಿಸಿದ್ದಾರೆ.