ವಾರಾಂತ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಂಭವ
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಆಗುತ್ತಿರುವ ನಷ್ಟ ಸರಿಪಡಿಸಲು ಈ ವಾರಾಂತ್ಯಕ್ಕೆ ಲೀಟರ್ ಪೆಟ್ರೋಲ್ಗೆ ರು. 1 ಹಾಗೂ ಡೀಸೆಲ್ಗೆ 50 ಪೈಸೆ ಹೆಚ್ಚಳವಾಗುವ ಸಂಭವವಿದೆ.
ನವದೆಹಲಿ: ಪೆಟ್ರೋಲ್ಗೆ ಇನ್ನೂ ಹೆಚ್ಚು ಬೆಲೆ ನೀಡಲು ಈಗಲೇ ಸಿದ್ದರಾಗಿ!. ಹೌದು. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಆಗುತ್ತಿರುವ ನಷ್ಟ ಸರಿಪಡಿಸಲು ಈ ವಾರದ ಅಂತ್ಯಕ್ಕೆ ಲೀಟರ್ ಪೆಟ್ರೋಲ್ಗೆ ರು. 1 ಹಾಗೂ ಲೀ. ಡೀಸೆಲ್ಗೆ 50 ಪೈಸೆ ಹೆಚ್ಚಳವಾಗುವ ಸಂಭವವಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಕಚ್ಚಾ ತೈಲಗಳ ಬೆಲೆ ಏರಿಕೆಯಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ದಿನ ಲೀ ಪೆಟ್ರೋಲ್ಗೆ ರು. 1.32 ನಷ್ಟ ಅನುಭವಿಸುತ್ತಿವೆ. ಈ ನಷ್ಟವನ್ನು ಸರಿದೂಗಿಸಲು ಫೆ. 15ರೊಳಗೆ ತೈಲ ಬೆಲೆಯಲ್ಲಿ ಏರಿಕೆ ಮಾಡುವ ಸಾಧ್ಯತೆ ಇದೆ.
ಮುಂದಿನ ವಾರಾಂತ್ಯಕ್ಕೆ ಡೀಸೆಲ್ ಬೆಲೆ 40 ರಿಂದ 50 ಪೈಸೆ, ಪೆಟ್ರೋಲ್ ಬೆಲೆ 80 ಪೈಸೆಯಿಂದ ರು. 1 ಹೆಚ್ಚಳವಾಗುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ನಷ್ಟ ಸರಿದುಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದು ಐಓಸಿ ಮುಖ್ಯಸ್ಥ ಆರ್.ಎಸ್.ಬಟ್ಟೋಲ್ ಹೇಳಿದ್ದಾರೆ.
ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ಯಾರೆಲ್ ಪೆಟ್ರೋಲ್ಗೆ 131 ಅಮೆರಿಕನ್ ಡಾಲರ್ ಹಾಗೂ ಬ್ಯಾರೆಲ್ ಡೀಸೆಲ್ಗೆ 123 ಡಾಲರ್ಗಳಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.