ಹೆಲಿಕಾಪ್ಟರ್ ಹಗರಣದಲ್ಲಿ ನನ್ನ ಪಾತ್ರ ಇಲ್ಲ: ತ್ಯಾಗಿ
ಹೆಲಿಕಾಪ್ಟರ್ ಖರೀದಿ ಅವ್ಯವಹಾರದಲ್ಲಿ ತಮ್ಮ ಪಾತ್ರವೇನು ಇಲ್ಲ ...
ನವದೆಹಲಿ: ಅತಿ ಗಣ್ಯ ವ್ಯಕ್ತಿಗಳ ಹೆಲಿಕಾಪ್ಟರ್ ಖರೀದಿ ಅವ್ಯವಹಾರ ಪ್ರಕರಣದ ಕೇಂದ್ರ ಬಿಂದುವಾಗಿರುವ ನಿವೃತ್ತ ವಾಯುಪಡೆ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರು, ಪ್ರಕರಣದಲ್ಲಿ ತಮ್ಮ ಪಾತ್ರವೇನು ಇಲ್ಲ ಎಂದು ಬುಧವಾರ ಸಮರ್ಥಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದಿರುವುದು ಅಚ್ಚರಿಯುಂಟುಮಾಡಿದ್ದು, ಸಿಬಿಐ ತನಿಖೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತ್ಯಾಗಿ ಹೇಳಿದ್ದಾರೆ. ಭಾರತೀಯ ವಾಯುಸೇನೆ (ಐಎಎಫ್) ಪಾಲಿಗೆ ಇದು ಒಂದು ಕೆಟ್ಟ ಸಂದೇಶವಾಗಿದೆ ಎಂದು ತ್ಯಾಗಿ ತಿಳಿಸಿದ್ದಾರೆ.
750 ಮಿಲಿಯನ್ ಡಾಲರ್ನ ಹೆಲಿಕಾಪ್ಟರ್ ಹಗರಣದಲ್ಲಿ ಇಟಲಿಯ ಫಿನ್ಮೆಕಾನಿಕಾರ ಕಂಪನಿಯೊಂದಿಗೆ 12 ಆಗಸ್ಟ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ಗಳ ಖರೀದಿಗೆ ಒಪ್ಪಂದವಾಗಿತ್ತು. ಐಎಎಫ್ಗೆ ಆಗಸ್ಟ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ಗಳು ಯೋಗ್ಯ. ಹಾಗೂ ಸಮರ್ಥ ಹೆಲಿಕಾಪ್ಟರ್ಗಳು ಎಂದು ತ್ಯಾಗಿ ಅಭಿಪ್ರಾಯ ಪಟ್ಟಿದ್ದಾರೆ. ತನಿಖೆಯಲ್ಲಿ ಸತ್ಯಾಂಶ ಹೊರಬರಲಿದ್ದು, ಹೆಲಿಕಾಪ್ಟರ್ಗಳನ್ನು ವಾಯುಸೇನೆಗೆ ಬಳಸಬೇಕೆ ಬೇಡವೆ ಎಂಬುದನ್ನು ಐಎಎಫ್ ನಿರ್ಧರಿಸಲಿದೆ ಎಂದು ಹೇಳಿದರು.
ವಿವಿಐಪಿಗಳಿಗೆ ಅಗತ್ಯವಾಗಿರು 18.000 ಅಡಿ ಮೇಲೆ ಹಾರಟ ನಡೆಸಬಲ್ಲ ಹೆಲಿಕಾಪ್ಟರ್ಗ ಅಗತ್ಯವಿತ್ತು. ಹಾಗಾಗಿ 2006ರಲ್ಲಿ ಟೆಂಡರ್ ಪ್ರಕಿಯೆ ನಡೆಸಲಾಗಿತ್ತು. ಟೆಂಡರ್ನಲ್ಲಿ ಸೇನಾ ಸಾಮುರ್ಥ್ಯಕ್ಕೆ ಅನುಗುಣವಾಗಿ ಇಟಲಿಯ ಆಗಸ್ಟ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ಗಳು ಇತ್ತು. ತಾವು ನಿವೃತ್ತಿಯಾದ ಮೂರು ವರ್ಷದ ಬಳಿಕ ಅಂದರೆ 2010ರಲ್ಲಿ 12 ಹೆಲಿಕಾಪ್ಟರ್ಗಳ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ತ್ಯಾಗಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.