ಕಂಡಾ, ಅರುಣಾ ಛಡ್ಡಾ ವಿರುದ್ಧ ಎಫ್‌ಐಆರ್ ದಾಖಲು
ನವದೆಹಲಿ: ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹರಿಯಾಣದ ಮಾಜಿ ಸಚಿವ ಗೋಪಾಲ್ ಕಂಡಾ ವಿರುದ್ಧ ದೆಹಲಿ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪಾಲ್ ಕಂಡಾ ಮತ್ತು ಅವರ ಆಪ್ತ ಸಹಾಯಕಿ ಅರುಣಾ ಚಡ್ಡಾ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಶುಕ್ರವಾರ ಗೀತೀಕಾ ಶರ್ಮಾ ಅವರ ತಾಯಿ ಅನುರಾಧ ಶರ್ಮಾ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನಲೆಯಲ್ಲಿ ಕಂಡಾ ಅವರ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆತ್ಮಹತ್ಯೆಗೂ ಮುನ್ನಾ, ಅನುರಾಧ ಶರ್ಮಾ ಅವರು ಕಂಡಾ ಮತ್ತು ಅರುಣಾ ಛಡ್ಡಾ ಅವರೇ ತಮ್ಮ ಸಾವಿಗೆ ಕಾರಣ ಎಂದು ಪತ್ರ ಬರೆದಿಟ್ಟು ಸಾವನ್ನಪ್ಪಿದ್ದಾರೆ.