ಅಂತರ್ಜಾಲ ಸೇವಾದರ ಏರಿಕೆ ಸಾಧ್ಯತೆ
ನವದೆಹಲಿ: ಅಂತರ್ಜಾಲ ಮತ್ತು ಬ್ರಾಡ್ಬ್ಯಾಂಡ್ ಸೇವಾದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸೋಮವಾರ ಮೂಲಗಳು ತಿಳಿಸಿವೆ.
ದೂರವಾಣಿ ಸಂಪರ್ಕ ಇಲಾಖೆಯ ಪ್ರಸ್ತಾವನೆ ಪ್ರಕಾರ ನೂತನ ಪರವಾನಗಿ ಪಡೆಯುವ ಪ್ರವೇಶ ಶುಲ್ಕ ಹೆಚ್ಚಿಸಿರುವ ಹಿನ್ನಲೆಯಲ್ಲಿ ಅಂತರ್ಜಾಲ ಸೇವಾ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಅಂತರ್ಜಾಲ ಸೇವೆ ನೀಡುವ ಸಂಬಂಧ ರಾಷ್ಟ್ರೀಯ ಯುನಿಫಾಯಿಡ್ ಲೈಸನ್ಸ್ ಪಡೆಯಲು ಪ್ರವೇಶ ಶುಲ್ಕವಾಗಿ 30 ಲಕ್ಷ ರುಪಾಯಿ ನೀಡುತ್ತಿದ್ದ ಕಂಪನಿಗಳ, ಇನ್ನೂ ಮುಂದೆ 15 ಕೋಟಿ ನೀಡುವ ಪ್ರಸ್ತಾವನೆಯನ್ನು ದೂರಸಂಪರ್ಕ ಇಲಾಖೆ ಮುಂದಿಟ್ಟಿದೆ.