ಡೀಸೆಲ್, ಪೆಟ್ರೋಲ್ ದರ ಇಳಿಕೆ ಮಾಡಲ್ಲ : ಮೊಯ್ಲಿ
ಕಳೆದ ವಾರ ಪೆಟ್ರೋಲ್ ದರ ಲೀಟರ್ ಗೆ 1.50 ಪೈಸೆ ಹಾಗು ಡೀಸೆಲ್ ದರ ಲೀಟರ್ ಗೆ 45 ಪೈಸೆ ಏರಿಕೆ...
ಬೆಂಗಳೂರು: ಕಳೆದ ವಾರ ಪೆಟ್ರೋಲ್ ದರ ಲೀಟರ್ ಗೆ 1.50 ಪೈಸೆ ಹಾಗು ಡೀಸೆಲ್ ದರ ಲೀಟರ್ ಗೆ 45 ಪೈಸೆ ಏರಿಕೆ ಮಾಡಿದ್ದ ಸರ್ಕಾರ ಇನ್ನು ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಲ್ಲ ಎಂದು ಹೇಳಿದೆ.
ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡುವ ಸಾಧ್ಯತೆಯಿದೆ ಎಂಬ ಸುದ್ದಿ ಹಬ್ಬಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ತೈಲ ಸಚಿವ ಎಂ. ವೀರಪ್ಪ ಮೊಯ್ಲಿ, ಸರ್ಕಾರ ದರ ಇಳಿಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮ ದೇಶ 73-75 ಶೇ. ತೈಲವನ್ನು ಆಮದು ಮಾಡುತ್ತದೆ. ಇದಕ್ಕಾಗಿ ನಾವು 7 ಲಕ್ಷ ಕೋಟಿ ರು.ಗಳನ್ನು ಪಾವತಿ ಮಾಡಬೇಕಾಗುತ್ತದೆ. ಇಷ್ಟೊಂದು ಹಣವನ್ನು ನಾವು ಎಲ್ಲಿಂದ ತರಲಿ? ಎಂದು ಮೊಯ್ಲಿ ಪ್ರಶ್ನಿಸಿದ್ದಾರೆ.
ಮೂರು ತಿಂಗಳ ಹಿಂದೆ ಪೆಟ್ರೋಲ್ ಬೆಲೆ ಏರಿಕೆ ಮಾಡಿದ ಸರ್ಕಾರ ಮತ್ತೆ ಒಂದು ತಿಂಗಳಲ್ಲಿ ಬೆಲೆ ಏರಿಕೆ ಮಾಡಿದ್ದು, ಇದು ಜನ ಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ.