ಫೆ.20ಕ್ಕೆ ಸರ್ವಪಕ್ಷ ಸಭೆ ಕರೆದ ಲೋಕಸಭಾ ಸ್ಪೀಕರ್
ಫೆ.21ಕ್ಕೆ ಸಂಸತ್ನಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನ ಸಾಂಗವಾಗಿ...
ನವದೆಹಲಿ: ಫೆ.21ಕ್ಕೆ ಸಂಸತ್ನಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನ ಸಾಂಗವಾಗಿ ನಡೆಯುವಂತೆ ಮಾಡಲು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಫೆ.20ಕ್ಕೆ ಸರ್ವಪಕ್ಷ ಸಭೆ ಕರೆದಿದ್ದಾರೆ.
3 ತಿಂಗಳುಗಳ ಅಧಿವೇಶನ ಆರಂಭಕ್ಕೆ ಮುನ್ನ ಸ್ಪೀಕರ್ ಎಲ್ಲ ಪಕ್ಷಗಳ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ಸಂಸತ್ನ ಮೂಲಗಳು ಹೇಳಿವೆ.
ಅಧಿವೇಶನದಲ್ಲಿ ವಿಪಕ್ಷಗಳು ಹೆಲಿಕಾಪ್ಟರ್ ಡೀಲ್ ಬಗ್ಗೆ ಧ್ವನಿಯೆತ್ತಿ ಕಲಾಪಕ್ಕೆ ಭಂಗ ತರುವ ಸಾಧ್ಯತೆ ದಟ್ಟವಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಕಮಲ್ನಾಥ್ ಈಗಾಗಲೇ ಸಚಿವರ ಕಾರ್ಯದರ್ಶಿಯವರನ್ನು ಭೇಟಿ ಮಾಡಿದ್ದು, ಅಧಿವೇಶನ ನಡೆಯಲು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಆದಾಗ್ಯೂ, ಹೆಲಿಕಾಪ್ಟರ್ ಹಗರಣದ ಬಗ್ಗೆ ಅಧಿವೇಶನದಲ್ಲಿ ದನಿಯೆತ್ತಲು ವಿಪಕ್ಷಗಳು ಸಜ್ಜಾಗಿದ್ದು, ಅಧಿವೇಶನವನ್ನು ಸಾಂಗವಾಗಿ ನಡೆಸಲು ಕೇಂದ್ರ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡುತ್ತಿದೆ.