ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವೀರಪ್ಪನ್ ಸಹಚರರ 'ಗಲ್ಲಿ'ಗೆ ಸುಪ್ರೀಂ ತಡೆ

ಗಲ್ಲು ಶಿಕ್ಷೆಗೆ ಗುರಿಯಾಗಿರುವ ವೀರಪ್ಪನ್‌ನ ನಾಲ್ವರ ಸಹಚರರಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ...

Lingaraj Badiger
Updated On : 18 Feb 2013, 12:34 pm

ನವದೆಹಲಿ: ಗಲ್ಲು ಶಿಕ್ಷೆಗೆ ಗುರಿಯಾಗಿರುವ ವೀರಪ್ಪನ್‌ನ ನಾಲ್ವರ ಸಹಚರರಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಸೋಮವಾರ ಸಹಚರರ ಗಲ್ಲು ಶಿಕ್ಷೆಗೆ ಎರಡು ದಿನಗಳ ಕಾಲ ತಡೆಯಾಜ್ಞೆ ವಿಧಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಗಲ್ಲು ಶಿಕ್ಷೆಗೆ ತಡೆ ಕೋರಿ ನಾಲ್ವರು ಸಹಚರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ಸುಪ್ರೀಂ ಪೀಠ, ಫೆಬ್ರುವರಿ 20ರ ವರೆಗೆ ತಾತ್ಕಾಲಿಕ ತಡೆ ನೀಡಿದೆ.

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ, 22 ಪೊಲೀಸರ ಹತ್ಯೆ ಪ್ರಕರಣದ ಅಪರಾಧಿಗಳಾಗಿರುವ ವೀರಪ್ಪನ್‌ನ ಸಹೋದರ ಜ್ಞಾನಪ್ರಕಾಶ್, ಮೀಸೆ ಮಾದಯ್ಯ, ಬಿಲವೇಂದ್ರ ಮತ್ತು ಸೈಮನ್ ಅವರು ತಮ್ಮ ಬದುಕುವ ಹಕ್ಕನ್ನು ಕಿತ್ತಿಕೊಳ್ಳಬಾರದು, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ, ಬದುಕಲು ಅವಕಾಶ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ವಿಲೇವಾರಿಗೆ 9 ವರ್ಷ ವಿಳಂಬವಾಗಿತ್ತು. ಈ ವಿಳಂಬವನ್ನು ಪ್ರಶ್ನಿಸಿ ವೀರಪ್ಪನ್‌ನ ನಾಲ್ವರು ಸಹಚರರು ಸುಪ್ರೀಂ ಕೋರ್ಟ್ ಮೇಟ್ಟಿಲೇರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement