ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಪ್ಟರ್ ಹಗರಣ: ಜೆಪಿಸಿ ತನಿಖೆಗೆ ವಹಿಸಲು ಸರ್ಕಾರ ಸಿದ್ಧ

ಗಣ್ಯಾತಿಗಣ್ಯರ 12 ಹೆಲಿಕಾಪ್ಟರ್ ಪೂರೈಕೆಯಲ್ಲಿ ರು.3,600 ಕೋಟಿ ರು ಡೀಲ್ ಹಗರಣದ ತನಿಖೆಯನ್ನು ...

Rashmi Kasaragodu
Updated On : 19 Feb 2013, 5:53 am

ನವದೆಹಲಿ: ಗಣ್ಯಾತಿಗಣ್ಯರ 12 ಹೆಲಿಕಾಪ್ಟರ್ ಪೂರೈಕೆಯಲ್ಲಿ ರು.3,600 ಕೋಟಿ ರು ಡೀಲ್ ಹಗರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ )ಸುಪರ್ದಿಗೆ ವಹಿಸಲು ಸಿದ್ಧ ಎಂದು ಭಾರತ ಸರ್ಕಾರ ಹೇಳಿದೆ.

ಭಾರತ ಇಟೆಲಿಯಿಂದ 12 ಹೆಲಿಕಾಪ್ಟರ್ ಖರೀದಿ ಮಾಡಿದ್ದರಲ್ಲಿ ಹಗರಣ ನಡೆದಿದ್ದು,  ಸದ್ಯ ಇದರ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಆದಾಗ್ಯೂ, ಈ ವಿಷದ ಬಗ್ಗೆ ತಾನು ಸಂಸತ್‌ನಲ್ಲಿ ಚರ್ಚೆಗೆ ಸಿದ್ಧ ಎಂದು ಪ್ರಧಾನಿ ಮನಮೋಹನ್ ಸಿಂಗ್ ನಿನ್ನೆ ಹೇಳಿದ್ದರು.

ಅದೇ ವೇಳೆ ಪ್ರಸ್ತುತ ಪ್ರಕರಣದ ಬಗ್ಗೆ ಸರಿಯಾದ ತನಿಖೆ ಮಾಡಬೇಕೆಂದು ಬಿಜೆಪಿ ಸೇರಿದಂತೆ ಇತರ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಮಾತ್ರವಲ್ಲದೆ ಬಜೆಟ್ ಅಧಿವೇಶನದಲ್ಲೂ ತಾವು ಪ್ರಸ್ತುತ ಹಗರಣದ ಬಗ್ಗೆ ಪ್ರಶ್ನೆಗಳನ್ನೆತ್ತುವುದಾಗಿ ಬಿಜೆಪಿ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement