ಕಾಪ್ಟರ್ ಹಗರಣ: ತನಿಖೆಗೆ ಸಹಕರಿಸುವುದಾಗಿ ಕೆಮರೂನ್ ಭರವಸೆ
ಬ್ರಿಟನ್ನ ಪ್ರಧಾನಿ ಡೇವಿಡ್ ಕೆಮರೂನ್ ಜತೆ ಮಾತುಕತೆ ನಡೆಸಿದ ಪ್ರಧಾನಿ ಮನಮೋಹನ್...
ನವದೆಹಲಿ: ಬ್ರಿಟನ್ನ ಪ್ರಧಾನಿ ಡೇವಿಡ್ ಕೆಮರೂನ್ ಜತೆ ಮಾತುಕತೆ ನಡೆಸಿದ ಪ್ರಧಾನಿ ಮನಮೋಹನ್ ಸಿಂಗ್ ಆಗಸ್ಟಾವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ತಾನು ಬ್ರಿಟನ್ ಪ್ರಧಾನಿ ಜತೆ ಕಾಪ್ಟರ್ ಹಗರಣದ ಬಗ್ಗೆ ಪ್ರಸ್ತಾಪಿಸಿದ್ದು, ಅವರು ತನಿಖೆಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆಂದು ಪ್ರಧಾನಿ ಹೇಳಿದ್ದಾರೆ.
ಭಾರತೀಯ ವಾಯುದಳಕ್ಕೆ ರು.3500 ಕೋಟಿ ರು ಒಪ್ಪಂದ ಪ್ರಕಾರ 12 ವಿವಿಐಪಿ ಹೆಲಿಕಾಪ್ಟರ್ಗಳನ್ನು ಪೂರೈಕೆ ಮಾಡುವಲ್ಲಿ ಹಗರಣ ನಡೆದಿದ್ದು, ಇದರ ತನಿಖೆಗೆ ಭಾರತ ಸರ್ಕಾರ ಬ್ರಿಟನ್ನ ಸಹಾಯ ಯಾಚಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.
ತಮ್ಮ ಮನವಿಗೆ ಪ್ರತಿಕ್ರಿಯೆ ನೀಡಿದ ಕೆಮರೂನ್, ತಾವು ಈ ಹಗರಣದ ತನಿಖೆಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾತುಕತೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಂಗ್ ಹೇಳಿದ್ದಾರೆ.