ಜೆಟ್ ಏರ್ವೇಸ್ ಟಿಕೆಟ್ ದರದಲ್ಲಿ ಶೇ.50 ಕಡಿತ
ಭಾರತದ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ಮಂಗಳವಾರ ...
ನವದೆಹಲಿ: ಭಾರತದ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ಮಂಗಳವಾರ ಟಿಕೆಟ್ ದರದಲ್ಲಿ ಶೇ.50ರಷ್ಟು ಕಡಿತ ಮಾಡಿದೆ.
ಮಾಧ್ಯಮಗಳ ವರದಿ ಪ್ರಕಾರ ಜೆಟ್ ವಿಮಾನಯಾನ ಸಂಸ್ಥೆ, ಭಾರತದ "ಅತೀದೊಡ್ಡ ಏರ್ ಟಿಕೆಟ್ ಮಾರಾಟ" ಘೋಷಣೆ ಮಾಡಿದೆ.
ಇದರ ಪ್ರಕಾರ 20 ಲಕ್ಷ ಸೀಟುಗಳಿಗೆ ಈ ದರ ಇಳಿಕೆ ಅನ್ವಯಿಸಲಿದೆ. ಮಾತ್ರವಲ್ಲದೆ ಟಿಕೆಟ್ ಬೆಲೆ 2250 ರು. ಆಗಿರುತ್ತದೆ.
ಈ ವರ್ಷ ಡಿಸೆಂಬರ್ 31ರ ವರೆಗೆ ಪ್ರಯಾಣಿಕರಿಗೆ ಈ ಸೌಲಭ್ಯ ಲಭ್ಯವಾಗಲಿದೆ. ಈ ಸೌಲಭ್ಯವನ್ನು ಪಡೆಯಬೇಕಾದವರು ಫೆ.24ರ ಮುನ್ನ ಟಿಕೆಟ್ ಕಾಯ್ದಿರಿಸಬೇಕಾಗಿದೆ .
ಇದೇ ವೇಳೆ ಇಂಡಿಗೋ ಏರ್ಲೈನ್ಸ್ ಕೂಡಾ ತಮ್ಮ ಟಿಕೆಟ್ ದರದಲ್ಲಿ ಶೇ.30-40ರಷ್ಟು ಕಡಿತ ಮಾಡಿವೆ.
ಕೆಲವು ವಾರಗಳ ಹಿಂದೆಯಷ್ಟೇ ಸ್ಪೈಸ್ಜೆಟ್ ಟಿಕೆಟ್ ದರದಲ್ಲಿ ಭಾರೀ ಕಡಿತ ಮಾಡಿದ ಬೆನ್ನಲ್ಲೇ ಇದೀಗ ಜೆಟ್ ಮತ್ತು ಇಂಡಿಗೋ ಟಿಕೆಟ್ ದರದಲ್ಲಿ ಕಡಿತ ಘೋಷಣೆ ಮಾಡಿದ್ದು, ಇನ್ಮುಂದೆ ವಿಮಾನಯಾನ ಜನಸಾಮಾನ್ಯನಿಗೂ ಕೈಗೆಟುಕುವಂತಾಗಿದೆ.